ರಾಷ್ಟ್ರೀಯ

8 ತಿಂಗಳ ಮಗುವಿಗೆ ಕೊರೋನಾ ವೈರಸ್ ಪಾಸಿಟಿವ್ ಪತ್ತೆ!

Pinterest LinkedIn Tumblr


ಶ್ರೀನಗರ: ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮ ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಇಂದು ಮತ್ತೆ ಎರಡು ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಇದರಲ್ಲಿ ಒಂದು ಎಂಟು ತಿಂಗಳ ಮಗುವೂ ಸೇರಿದೆ.

ಶ್ರೀನಗರದಲ್ಲಿ ಇಂದು ಪತ್ತೆಯಾಗಿರುವ ಎರಡು ಹೊಸ ಪಾಸಿಟಿವ್ ಪ್ರಕರಣಗಳಲ್ಲಿ ಇಬ್ಬರೂ ಒಡಹುಟ್ಟಿದವರಾಗಿದ್ದು ಒಂದು ಎಂಟು ತಿಂಗಳ ಮಗುವಾಗಿದ್ದರೆ, ಇನ್ನೊಂದು 7 ವರ್ಷದ ಮಗುವಾಗಿದೆ. ಇದು ದೇಶದಲ್ಲೇ ಅತೀ ಕಿರಿಯ ಪ್ರಾಯದವರಲ್ಲಿ ವೈರಸ್ ಪತ್ತೆಯಾಗಿರುವ ಮೊದಲ ಪ್ರಕರಣವಾಗಿದೆ.

ಇದು ದೇಶದಲ್ಲೇ ಅತೀ ಕಿರಿಯ ಪ್ರಾಯದವರಲ್ಲಿ ವೈರಸ್ ಪತ್ತೆಯಾಗಿರುವ ಮೊದಲ ಪ್ರಕರಣವಾಗಿದೆ. ಈ ಎರಡೂ ಮಕ್ಕಳು ಇತ್ತೀಚೆಗಷ್ಟೇ ಸೌದಿ ಅರೇಬಿಯಾದಿಂದ ಮರಳಿದ್ದ ವ್ಯಕ್ತಿಯೊಬ್ಬರ ಮೊಮ್ಮಕ್ಕಳಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಈ ಎರಡು ಪ್ರಕರಣಗಳ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊವಿಡ್ 19 ಸೋಂಕಿನ ಪ್ರಕರಣಗಳು 11ಕ್ಕೆ ಏರಿದಂತಾಗಿದೆ.

Comments are closed.