ರಾಷ್ಟ್ರೀಯ

ಕ್ಯಾಷ್ ವಿತ್ ಡ್ರಾ ಮೇಲಿನ ನಿರ್ಬಂಧ ಸಡಿಲಿಸಿದ ಕೇಂದ್ರ ಸರ್ಕಾರ

Pinterest LinkedIn Tumblr

ನವದೆಹಲಿ: ಕೊರೊನಾ ವೈರಸ್ ಭಯದಿಂದ ದೇಶಾದ್ಯಂತ ಜನರು ಲಾಕ್ ಡೌನ್ ನಿರ್ಬಂಧ ಪಾಲಿಸಬೇಕೆಂದು ಆದೇಶಿಸಿರುವ ಕೇಂದ್ರ ಸರ್ಕಾರ, ಕ್ಯಾಷ್ ವಿತ್ ಡ್ರಾ ಮೇಲಿನ ನಿರ್ಬಂಧವನ್ನು ಸಡಿಲಿಸಿದೆ.

ಇತರ ಬ್ಯಾಂಕ್ ಗಳ ಎಟಿಎಂ ನಿಂದ ನಗದು ಹಿಂಪಡೆಯುವಿಕೆಯ ಮೇಲೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಸ್ಪಷ್ಟಪಡಿಸಿದರು.

ಮೂರು ತಿಂಗಳವರೆಗೂ ಯಾವುದೇ ಬ್ಯಾಂಕ್, ಯಾವುದೇ ಎಟಿಎಂನಲ್ಲಿ ನಗದು ಹಣವನ್ನು ಹಿಂಪಡೆಯಬಹುದು ಎಂದು ಅವರು ಹೇಳಿದ್ದಾರೆ.

ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ನಗದು ಮಿತಿಯನ್ನು ರದ್ದುಪಡಿಲಾದೆ. ಈ ನಿರ್ಣಯದಿಂದಾಗಿ ಲಾಕ್ ಡೌನ್ ಒಳಗಾಗಿರುವ ಜನರಿಗೆ ತುಸು ನಿರಾಳತೆಯನ್ನು ಮೂಡಿಸಿದೆ. ಈ ಸಡಿಲಿಕೆಯಿಂದಾಗಿ ಕನಿಷ್ಟ ನಗದು ಮಿತಿ ಹಣವನ್ನು ದೈನಂದಿನ ಖರ್ಚುಗಳಿಗೆ ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

Comments are closed.