ರಾಷ್ಟ್ರೀಯ

ದೇಶಾದ್ಯಂತ 75 ಜಿಲ್ಲೆಗಳು ಸಂಪೂರ್ಣ ಲಾಕ್ ಡೌನ್, 1897 ಕಾಯ್ದೆ ಜಾರಿಗೊಳಿಸಿದ ಕೇಂದ್ರ

Pinterest LinkedIn Tumblr


ನವದೆಹಲಿ: ದೇಶಾದ್ಯಂತ ಕೋವಿಡ್ 19 ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಭಾರತದಲ್ಲಿ ಒಟ್ಟು 75 ಜಿಲ್ಲೆಗಳನ್ನು ಸಂಪೂರ್ಣ ಲಾಕ್ ಡೌನ್ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕೋವಿಡ್ 19 ಹರಡುವುದನ್ನು ತಡೆಗಟ್ಟಲು ಇಡಿಎ(ಎಪಿಡೆಮಿಕ್ ಡೀಸಿಸ್ ಆ್ಯಕ್ಟ್) ಕಾಯ್ದೆ 1897 ಅನ್ನು ದಿಲ್ಲಿ, ಉತ್ತರಾಖಂಡ್, ಪಂಜಾಬ್, ತೆಲಂಗಾಣ, ಬಿಹಾರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಜಾರಿಗೊಳಿಸಲು ಸಿದ್ಧವಾಗಿದೆ. ಏನಿದು 1897ರ ಕಾಯ್ದೆ? ಯಾಕಾಗಿ ಜಾರಿ ಮಾಡಲಾಗುತ್ತದೆ ಎಂಬ ಕಿರು ಮಾಹಿತಿ ಇಲ್ಲಿದೆ.

ಭಾರತದಲ್ಲಿ ಕೋವಿಡ್ 19 ವೈರಸ್ ಪ್ರಕರಣ 400ಕ್ಕೆ ಏರಿಕೆಯಾಗಿದ್ದು, ನಿನ್ನೆ ಒಂದೇ ದಿನದಲ್ಲಿ 81 ಪ್ರಕರಣಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ 1897 Epidemic Diseases Act.

ಈ ಕಾಯ್ದೆಯನ್ನು ಮೊದಲು ಜಾರಿಗೆ ತಂದಿದ್ದು ಬ್ರಿಟಿಷ್ ಸರ್ಕಾರ. 1890ರಲ್ಲಿ ಬಾಂಬೆ ಪ್ರೆಸಿಡೆನ್ಸಿಯಿಂದ ಉಳಿದ ಭಾಗಗಳಿಗೆ ಪ್ಲೇಗ್ ಮಹಾಮಾರಿ ಹರಡದಂತೆ ತಡೆಗಟ್ಟಲು ಇಡಿಎ ಕಾಯ್ದೆ ಜಾರಿಗೊಳಿಸಿದ್ದರು.

ಈ ಕಾಯ್ದೆ ಮನೆಯಲ್ಲಿರುವ ಶಂಕಿತ ಪ್ರಕರಣಗಳ ಪತ್ತೆಹಚ್ಚಲು, ಪ್ರಯಾಣಿಕರನ್ನು ಪತ್ತೆ ಹಚ್ಚುವ ಅಧಿಕಾರ ನೀಡುತ್ತದೆ. ಅಷ್ಟೇ ಅಲ್ಲ ಸೋಂಕು ಪೀಡಿತ ಪ್ರದೇಶಗಳಲ್ಲಿ ಜನರನ್ನು ಬಲವಂತವಾಗಿ ಪ್ರತ್ಯೇಕಿಸುವ, ಖಾಲಿ ಮಾಡಿಸುವ ಹಾಗೂ ಧ್ವಂಸಗೊಳಿಸುವ ಅಧಿಕಾರ ನೀಡುತ್ತದೆ.

ಹರ್ಯಾಣ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಚಂಡೀಗಢ್, ಚತ್ತೀಸ್ ಗಢ್, ದಿಲ್ಲಿ, ಗುಜರಾತ್, ರಾಜಸ್ಥಾನ್, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ, ಉತ್ತರಾಖಂಡ್, ಪಶ್ಚಿಮಬಂಗಾಳದ ರಾಜ್ಯಗಳ ಒಟ್ಟು 75 ಜಿಲ್ಲೆಗಳಲ್ಲಿನ ಕೆಲವು ಪ್ರದೇಶಗಳನ್ನು ಲಾಕ್ ಡೌನ್ ಮಾಡಲಾಗಿದೆ.

Comments are closed.