ರಾಷ್ಟ್ರೀಯ

ಕೋವಿಡ್-19: ಪಂಜಾಬ್ ಸಂಪೂರ್ಣ ಬಂದ್

Pinterest LinkedIn Tumblr


ಪಂಜಾಬ್: ದೇಶದಲ್ಲಿ ಕೋವಿಡ್-19 ಭೀತಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪಂಜಾಬ್ ರಾಜ್ಯವನ್ನು ಸಂಪೂರ್ಣ ಲಾಕ್ ಡೌನ್ ಮಾಡುವಂತೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಆದೇಶ ನೀಡಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಆದರೇ ಅಗತ್ಯವಾದ ಮತ್ತು ತುರ್ತು ಸೇವೆಗಳನ್ನು ಮಾತ್ರ ಲಭ್ಯವಾಗಲಿದೆ. ಹೊರರಾಜ್ಯದ ಜೊತೆ ಯಾವುದೇ ಸಂಪರ್ಕವಿರುವುದಿಲ್ಲ, ಸಾರಿಗೆ ಸಂಪರ್ಕಗಳನ್ನು ಕೂಡ ನಿಷೇಧಿಸಲಾಗಿದೆ ಎಂದು ತಮ್ಮ ಸಿಎಂ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.

ಪಂಜಾಬ್, ಹರ್ಯಾಣ, ಮುಂತಾದ ಕಡೆ ಜನತಾ ಕರ್ಫ್ಯೂ ಕಾರಣದಿಂದ ರಸ್ತೆಗಳೆಲ್ಲ ಸಂಪೂರ್ಣ ಸ್ತಬ್ಧವಾಗಿದೆ. ಮೆಡಿಕಲ್ ಶಾಫ್ ಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಸೇವೆಗಳು ಅಲಭ್ಯವಾಗಿದೆ. ಶನಿವಾರ ಸಂಜೆ ಮಾರ್ಚ್ 25 ರವರೆಗೂ ಕಪುರ್ತಾಲ, ಜಲಂಧರ್ ಸೇರಿದಂತೆ ಕೆಲವು ಜಿಲ್ಲೆಗಳನ್ನು ಸಂಪೂರ್ಣ ಲಾಕ್ ಡೌನ್ ಮಾಡುವಂತೆ ಪಂಜಾಬ್ ಸರ್ಕಾರ ಆದೇಶಿಸಿತ್ತು.

ಶನಿವಾರ ಪಂಜಾಬ್ ನಲ್ಲಿ ಒಮ್ಮೆಲೆ 11 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

Comments are closed.