
ನವದೆಹಲಿ: ಕೋವಿಡ್-19 ಸೋಂಕು ವಿಶ್ವಾದ್ಯಂತ 110 ದೇಶಗಳಲ್ಲಿ ಹಬ್ಬುವ ಮೂಲಕ ಭೀತಿಯನ್ನು ಹುಟ್ಟಿಸಿದೆ. ಅಲ್ಲದೇ ಈವರೆಗೂ ಕೋವಿಡ್-19 ಗುಣಪಡಿಸುವ ಯಾವುದೇ ಲಸಿಕೆ ಕಂಡುಹಿಡಿದಿಲ್ಲ. ಏತನ್ಮಧ್ಯೆ ಅಧಿಕ ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಕೋವಿಡ್ -19 ವೈರಸ್ ಸಾವನ್ನಪ್ಪುತ್ತದೆ ಎಂಬ ವಾದ ಪ್ರಚಲಿತದಲ್ಲಿದೆ.
ಈ ಹಿನ್ನೆಲೆಯಲ್ಲಿ ನಿಜಕ್ಕೂ ಅಧಿಕ ಉಷ್ಣಾಂಶ ಇರುವ ಪ್ರದೇಶದಲ್ಲಿ ಕೋವಿಡ್-19 ವೈರಸ್ ಸಾವನ್ನಪ್ಪುತ್ತದೆಯೇ ಎಂಬ ವಿಷಯದ ಕುರಿತು ನವಿ ಮುಂಬೈ ಅಪೋಲೊ ಆಸ್ಪತ್ರೆಯ ವೈದ್ಯರಾದ ಲಕ್ಷ್ಮಣ್ ಜೆಸ್ಸಾನಿ ಅವರ ಪ್ರಕಾರ, ಅಧಿಕ ಉಷ್ಣಾಂಶದಲ್ಲಿ ಕೋವಿಡ್-19 ವೈರಸ್ ಸಾಯುತ್ತದೆ ಎಂಬುದಕ್ಕೆ ವಿಜ್ಞಾನಿಗಳು ಈವರೆಗೂ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ ಎಂದು ತಿಳಿಸಿದ್ದಾರೆ.
ವೈರಸ್ ಗಳು ಶುಷ್ಕ ವಾತಾವರಣದ ಹೊರಮೈಯಲ್ಲಿ 8ರಿಂದ 10 ದಿನಗಳವರೆಗೆ ಜೀವಂತವಾಗಿರುತ್ತದೆ. ಮನುಷ್ಯನ ದೇಹದೊಳಗಿರುವ 37 ಡಿಗ್ರಿ ಸೆಲ್ಸಿಸಿಯಸ್ ನಡುವೆಯೂ ಜೀವಂತವಾಗಿರುತ್ತದೆ. ಎಲ್ಲಾ ವೈರಸ್ ಗಳೂ ಬಿಸಿ ವಾತಾವರಣದಲ್ಲಿ ಜೀವಂತವಾಗಿರುತ್ತದೆ. ಅತೀಯಾದ ಬಿಸಿಗೆ ನಿಷ್ಕ್ರಿಯ ಅಥವಾ ನಾಮಾವಶೇಷಗೊಳ್ಳಬಹುದು. ಆದರೆ ಬಿಸಿ ವಾತಾವರಣದಲ್ಲಿ ಕೋವಿಡ್ 19 ವೈರಸ್ ನಿಷ್ಕ್ರಿಯಗೊಳ್ಳಲಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ವಿವರಿಸಿದ್ದಾರೆ.
Comments are closed.