
ನವದೆಹಲಿ : ಎಲ್ಲೆಡೆ ಕೊರೊನಾ ವೈರಸ್ ಭಯ ಭೀತಿಯಲ್ಲಿ ಜನ ಯಾವುದನ್ನು ಕೇಳಬೇಕು, ಯಾವುದನ್ನು ಕೇಳಬಾರದು, ಯಾವ ಕ್ರಮ ಸೂಕ್ತ, ಯಾವುದು ಅಲ್ಲ ಎನ್ನುವ ಆತಂತ್ರದಲ್ಲಿದ್ದಾರೆ. ಜನರ ಈ ಭೀತಿಯನ್ನು ದೂರವಾಗಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮುಂಜಾಗ್ರತ ಕ್ರಮವಾಗಿ ನಾವೇನು ಮಾಡಬೇಕು ಎನ್ನುವುದನ್ನು ಮಾರ್ಗದರ್ಶನ ನೀಡಿದೆ.
ನೀವು ಮುಂಜಾಗ್ರತ ಕ್ರಮವಾಗಿ ಮಾಸ್ಕ್ ಗಳನ್ನು ಧರಿಸಿಕೊಳ್ಳುತ್ತೀರಿ ಅನ್ನುವುದಾದರೆ ಹೀಗೆ ಮಾಡಿ :
ನೀವು ತೊಟ್ಟಿರುವ ಮಾಸ್ಕ್ ಗಳ ಕೆಳಮುಖವಾಗಿರಬೇಕು.
ಮಾಸ್ಕ್ ಗಳು ಒದ್ದೆಯಾದ ಬಳಿಕ ಅಂದರೆ ಆರು ಗಂಟೆಯ ನಂತರ ಅದನ್ನು ಬದಲಾಯಿಸುವುದನ್ನು ಮರೆಯದಿರಿ.
ಮಾಸ್ಕ್ ಗಳನ್ನು ಸರಿಯಾದ ಕ್ರಮದಲ್ಲಿ ಹಾಕಿಕೊಳ್ಳಿ ಅಂದರೆ, ನಿಮ್ಮ ಮೂಗು, ಬಾಯಿ. ಗಲ್ಲ ಮುಚ್ಚುವಂತೆ ಹಾಕಿಕೊಳ್ಳಿ.ಯಾವುದೇ ಬದಿಯಲ್ಲಿ ಅಂತವಿರದಂತೆ ನೋಡಿಕೊಳ್ಳಿ.
ಬಳಿಸಿದ ಮಾಸ್ಕ್ ಗಳನ್ನು ಪುನಃ ಬಳಸಬೇಡಿ, ಉಪಯೋಗಿಸಿದ ,ಮಾಸ್ಕ್ ಗಳನ್ನು ಸೋಂಕು ನಿವಾರಕಗಳಿಂದ ಶುಚ್ಚಿಗೊಳಿಸಿ ಅದನ್ನು ಕಸದ ಬುಟ್ಟಿಯಲ್ಲಿ ಹಾಕಿ ( ಮುಚ್ಚಳ ಇರುವ ಬುಟ್ಟಿ).
ಧರಿಸಿರುವ ಮಾಸ್ಕ್ ಗಳನ್ನು ಪದೇ ಪದೇ ಕೈಗಳಿಂದ ಮುಟ್ಟುತ್ತಿರಬಾರದು ಹಾಗೂ ಮಾಸ್ಕ್ ತೆಗೆಯುವಾಗ ಅದರ ಮೇಲ್ಮೈಯನ್ನು ಮುಟ್ಟಬೇಡಿ.
ಮಾಸ್ಕ್ ತೆಗೆದ ಬಳಿಕ ನಿಮ್ಮ ಕೈಗಳನ್ನು ಸೋಪಿನ ನೀರು ಅಥವಾ ಸ್ಯಾನಿಟೈಸರ್ ನಿಂದ ಸ್ವಚ್ಛ ಮಾಡಿಕೊಳ್ಳಿ.
Comments are closed.