ರಾಷ್ಟ್ರೀಯ

ಮಹಾರಾಷ್ಟ್ರದಲ್ಲಿಯೇ 9 ಕೊರೋನಾ ವೈರಸ್ ಸೋಂಕು; ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 105ಕ್ಕೇರಿಕೆ

Pinterest LinkedIn Tumblr

ನವದೆಹಲಿ: ಸ್ಪೈನ್ ನಿಂದ ಆಗಮಿಸಿದ ಜೈಪುರ ಮೂಲದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಪತ್ತೆಯಾದ ನಂತರ ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಭಾನುವಾರ 105ಕ್ಕೇರಿದೆ. ಮಹಾರಾಷ್ಟ್ರ ರಾಜ್ಯವೊಂದರಲ್ಲಿಯೇ 9 ಕೊರೋನಾ ವೈರಸ್ ಸೋಂಕು ತಗುಲಿದವರು ಇಂದು ದೃಢಪಟ್ಟಿದ್ದು ಇಲ್ಲಿ ಒಟ್ಟು ಸೋಂಕಿತರ ಸಂಖ್ಯೆ 31ಕ್ಕೇರಿದ್ದು ಕೇರಳವನ್ನು ಹಿಂದಿಕ್ಕಿದೆ.

ಈ ಮಧ್ಯೆ ತೆಲಂಗಾಣದಲ್ಲಿ ಕೂಡ ಎರಡನೇ ಕೊರೋನಾ ಸೋಂಕು ಪತ್ತೆಯಾಗಿದ್ದು ಇಟಲಿಯಿಂದ ಬಂದ ವ್ಯಕ್ತಿಯಲ್ಲಿ ಕಾಣಿಸಿಕೊಂಡಿದ್ದು ಹೈದರಾಬಾದ್ ನ ಗಾಂಧಿ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದಲ್ಲದೆ ಇನ್ನೂ ಎರಡು ಶಂಕಿತ ಕೇಸುಗಳು ರಾಜ್ಯದಲ್ಲಿ ಪತ್ತೆಯಾಗಿದೆ. ರಕ್ತದ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದ್ದು ವರದಿ ಸಿಗಲು ಕಾಯುತ್ತಿದ್ದಾರೆ.

ತೆಲಂಗಾಣದಲ್ಲಿ ಮೊದಲ ಬಾರಿಗೆ ಕೊರೋನಾ ವೈರಸ್ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ 24 ವರ್ಷದ ಟೆಕ್ಕಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

Comments are closed.