ರಾಷ್ಟ್ರೀಯ

ಕೊರೊನಾ ಭೀತಿಯ ನಡುವೆ ಮುಂದುವರಿದ ಶಹೀನ್ ಭಾಗ್ ಸಿಎಎ ವಿರೋಧಿ ಹೋರಾಟ

Pinterest LinkedIn Tumblr


ಹೊಸದಿಲ್ಲಿ: ದೇಶದಲ್ಲಿ ಕೊರೊನಾ ವೈರಸ್ ತೀವ್ರವಾಗಿ ಕಾಡುತ್ತಿದ್ದು, ಜನಜೀವನ ಬಹುತೇಕ ಸಂಕಷ್ಟಕ್ಕೆ ಒಳಗಾಗಿದೆ. ಕೇರಳ, ಕೇರಳ, ದಿಲ್ಲಿ ಸೇರಿದಂತೆ ಬಹುತೇಕ ರಾಜ್ಯಗಳು ಲಾಕ್ ಡೌನ್ ಪರಿಸ್ಥಿತಿಗೆ ತಲುಪಿದೆ. ಇಷ್ಟೆಲ್ಲದರ ನಡುವೆಯೂ ಶಹೀನ್ ಭಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿದೆ.

ಕಳೆದ ಮೂರು ತಿಂಗಳಿಂದ ಶಹೀನ್ ಭಾಗ್ ನಲ್ಲಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ ನಡೆಯುತ್ತಿದೆ. ಕೊರೊನಾ ವೈರಸ್ ಭೀತಿಯ ನಡುವೆಯೂ ಇದು ಮುಂದುವರಿದಿದೆ.

ದಿಲ್ಲಿಯಲ್ಲಿ ಮಾರ್ಚ್ 31ರವರೆಗೆ ಬಂದ್ ಮಾಡಲು ರಾಜ್ಯ ಸರಕಾರ ಆದೇಶಿಸಿದೆ. 200 ಜನರಿಗಿಂತ ಹೆಚ್ಚು ಜನರು ಸೇರುವ ಯಾವುದೇ ಕಾರ್ಯಕ್ರಮವನ್ನು ನಡೆಸುವಂತಿಲ್ಲ ಎಂದು ಸರಕಾರ ತಿಳಿಸಿದೆ. ಶಾಲೆಗಳು, ಚಿತ್ರ ಮಂದಿರಗಳು, ಸೆಮಿನಾರ್ ಗಳು, ಕ್ರೀಡಾಕೂಟಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಆದರೆ ಶಹೀನ್ ಭಾಗ್ ಪ್ರತಿಭಟನೆ ಮುಂದುವರಿದಿದೆ.

ದಿಲ್ಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ, ಪ್ರತಿಭಟನಾಕಾರರನ್ನು ಅಲ್ಲಿಂದ ತೆರವುಗೊಳಿಸುವ ಕುರಿತು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು. ನಾವು ಬಹಳಷ್ಟು ಕ್ರಮ ಕೈಗೊಂಡಿದ್ದೇವೆ. ಆದರೂ ಜನರು ಸೇರುತ್ತಾರೆ ಎಂದರೆ ಸಭೆ ಸೇರದಂತೆ ನಾವು ಮನವಿ ಮಾಡುತ್ತೇವೆ. ಸಾರ್ವಜನಿಕರ ಆರೋಗ್ಯ ಬಹುಮುಖ್ಯ ಎಂದಿದ್ದಾರೆ.

ದೇಶದಲ್ಲಿ ಇದುವರಗೆ 83 ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಕರ್ನಾಟಕ, ಉತ್ತರಪ್ರದೇಶ, ದಿಲ್ಲಿ, ಬಿಹಾರ, ಒಡಿಶಾ, ಮಧ್ಯಪ್ರದೇಶ, ಪಂಜಾಬ್, ಮಹಾರಾಷ್ಟ್ರ, ಜಾರ್ಖಂಡ್, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಛತ್ತೀಸ್ ಗಡ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಶಾಲಾ ಕಾಲೇಜುಗಳು, ಸಾರ್ವಜನಿಕ ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ.

Comments are closed.