ರಾಷ್ಟ್ರೀಯ

ಆಸ್ಪತ್ರೆಯಿಂದಲೇ ಐದು ಮಂದಿ ಕೊರೊನಾ ವೈರಸ್ ಶಂಕಿತರು ಪರಾರಿ!

Pinterest LinkedIn Tumblr


ಮಹಾರಾಷ್ಟ್ರ: ಕೊರೊನಾ ಸೋಂಕು ತಗುಲಿದೆ ಎಂಬ ಭೀತಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಐವರು ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ್ ಆಸ್ಪತ್ರೆಯಲ್ಲಿ ನಡೆದಿರುವುದಾಗಿ ಎಎನ್ ಐ ಶನಿವಾರ ವರದಿ ಮಾಡಿದೆ.

ನಾಗ್ಪುರದ ಮೆಯೋ ಜನರಲ್ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ನಲ್ಲಿದ್ದ ಐವರು ಶಂಕಿತ ರೋಗಿಗಳು ಪರಾರಿಯಾಗಿದ್ದರು. ಇವರಲ್ಲಿ ಪರೀಕ್ಷೆಗೊಳಪಟ್ಟಿದ್ದ ಒಬ್ಬ ವ್ಯಕ್ತಿಯ ವರದಿ ಪಾಸಿಟಿವ್ ಆಗಿದ್ದು, ಉಳಿದ ನಾಲ್ವರ ವರದಿಗಾಗಿ ಕಾಯಲಾಗುತ್ತಿತ್ತು.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಐವರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ಆಸ್ಪತ್ರೆಗೆ ಕರೆತರಲಾಗಿದೆ ಎಂದು ನಾಗ್ಪುರ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಎಸ್ ಸೂರ್ಯವಂಶಿ ತಿಳಿಸಿರುವುದಾಗಿ ಎಎನ್ ಐ ವರದಿ ತಿಳಿಸಿದೆ.

ಮಾರ್ಚ್ 6ರಂದು ಅಮೆರಿಕದಿಂದ ಮಹಾರಾಷ್ಟ್ರಕ್ಕೆ ಬಂದಿದ್ದ ಐಟಿ ಉದ್ಯೋಗಿಯನ್ನು ಪರೀಕ್ಷೆಗೊಳಪಡಿಸಿದಾಗ ಕೊರೊನಾ ವೈರಸ್ ಪತ್ತೆಯಾಗುವ ಮೂಲಕ ಮೊದಲ ಪ್ರಕರಣ ವರದಿಯಾಗಿತ್ತು. ನಂತರ ಮೆಯೋ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಒಟ್ಟು ನಗರದಲ್ಲಿ 16 ಮಂದಿ ಕೊರೋನಾ ಶಂಕಿತರ ಪ್ರಕರಣ ವರದಿಯಾಗಿದೆ.

Comments are closed.