ರಾಷ್ಟ್ರೀಯ

ಗೆಳೆಯರೊಂದಿಗೆ ಖಾಸಗಿ ವಿಡಿಯೋ ಹಂಚಿಕೊಂಡ ಪ್ರಿಯಕರ: ಬಾಲಕಿ ಆತ್ಮಹತ್ಯೆ

Pinterest LinkedIn Tumblr


ಗುಜರಾತ್: ಪ್ರೀತಿಸುತ್ತಿದ್ದ ವ್ಯಕ್ತಿಯೇ ತಮ್ಮ ಖಾಸಗಿ ವಿಡಿಯೋವನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾಕ್ಕಾಗಿ 16 ವರ್ಷದ ಬಾಲಕಿಯೊಬ್ಬಳು ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಈ ಘಟನೆ ಅಹಮದಾಬಾದ್ ನ ಚಾರ್ ನಗರ್ ನಲ್ಲಿ ನಡೆದಿದೆ. ಬಾಲಕಿ ಈ ಕಾರಣಕ್ಕೆ ಹಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ವರ್ಷಗಳಿಂದ ಈ ಬಾಲಕಿ ಯುವಕನೋರ್ವನನ್ನು ಪ್ರೀತಿ ಮಾಡುತ್ತಿದ್ದಳು. ಈ ಸಮಯದಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ಚಿತ್ರಿಸಿದ್ದ ಖಾಸಗಿ ವಿಡಿಯೋವೊಂದನ್ನು ಆತನೇ ತನ್ನ ಮೂವರು ಸ್ನೇಹಿತರಿಗೆ ಫಾರ್ವರ್ಡ್ ಮಾಡಿದ್ದನು. ಈ ರೀತಿ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದ್ದವು. ಫೆಬ್ರವರಿ 29 ರಂದು ವಿಷಯ ತಿಳಿದ ಬಾಲಕಿಯ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಆದರೇ ವ್ಯಾಪಕವಾಗಿ ಖಿನ್ನತೆಗೆ ತುತ್ತಾದ ಬಾಲಕಿ ಸೋಮವಾರ ರಾತ್ರಿ ನೇಣು ಬಿಗಿದುಕೊಂಡಿದ್ದಾಳೆ ಎಂದು ಸರ್ದಾರ್ ನಗರ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹೇಮಂತ್ ಪಟೇಲ್ ತಿಳಿಸಿದ್ದಾರೆ.

ಯುವಕನ ವಿರುದ್ದ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಾತ್ರವಲ್ಲದೆ ವಿಡಿಯೋ ವ್ಯಾಪಕವಾಗಿ ವೈರಲ್ ಆಗಲು ಕಾರಣರಾಗಿದ್ದ ಮೂವರು ಸ್ನೇಹಿತರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ. ಇದೀಗ ನಾಲ್ವರು ಕೂಡ ಪೊಲೀಸರ ವಶದಲ್ಲಿದ್ದಾರೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ

Comments are closed.