
ನವದೆಹಲಿ: ನಿರ್ಭಯಾ ಹಂತಕರಲ್ಲೊಬ್ಬನಾದ ಮುಕೇಶ್ ಸಿಂಗ್, ಗಲ್ಲು ಶಿಕ್ಷೆಯಿಂದ ಪಾರಾಗಲು ತನಗಿರುವ ಕಾನೂನಾತ್ಮಕ ಅವಕಾಶಗಳೆಲ್ಲವನ್ನೂ ಮತ್ತೆ ಮೊದಲಿನಿಂದ ಉಪಯೋಗಿಸಲು ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾನೆ.
2018ರಲ್ಲಿ ತನಗೆ ಮೊದಲ ಬಾರಿ ಗಲ್ಲು ಶಿಕ್ಷೆ ಜಾರಿಯಾಗಿದೆ. ಕಾನೂನಿನನ್ವಯ ಆ ಶಿಕ್ಷೆಯಿಂದ ಪಾರಾಗಲು ಇರುವ ಕಾನೂನು ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಲು ನನಗೆ 3 ವರ್ಷಗಳ ಕಾಲಾವಕಾಶವಿದೆ. ಆದರೆ, ಇದನ್ನು ಮುಚ್ಚಿಟ್ಟ ಕೇಂದ್ರ ಗೃಹ ಇಲಾಖೆ, ದೆಹಲಿ ಸರ್ಕಾರ, ಅಮಿಕಸ್ ಕ್ಯೂರಿಯಾಗಿರುವ ವೃಂದಾ ಗ್ರೋವರ್, ನನಗೆ ತಪ್ಪು ಮಾಹಿತಿ ನೀಡಿ, ಬೇಗ ಬೇಗನೇ ಕೆಲವು ಕ್ಯುರೇಟಿವ್ ಅರ್ಜಿಗಳಿಗೆ ಹಾಗೂ ಕೆಲವು ಮೇಲ್ಮನವಿಗಳಿಗೆ ಸಹಿ ಹಾಕಿಸಿಕೊಂಡು ಅವುಗಳನ್ನು ಹೈಕೋರ್ಟ್, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ” ಎಂದು ಆತ ಆಪಾದಿಸಿದ್ದಾನೆ.
ವಿಶ್ವಸಂಸ್ಥೆಗೆ ಮನವಿ
ಹಂತಕರನ್ನು ಗಲ್ಲಿಗೇರಿಸಲಾಗುವ ಮಾ. 20ರ ದಿನವನ್ನು “ಅಂತಾರಾಷ್ಟ್ರೀಯ ಅತ್ಯಾಚಾರ ನಿಗ್ರಹ ದಿನ’ವೆಂದು ಘೋಷಿಸಬೇಕಾಗಿ ಭಾರತದ ಮಹಿಳಾ ಕಾರ್ಯಕರ್ತೆಯಾದ ಯೋಗಿತಾ ಭಯಾನಾ ಎಂಬುವರು ವಿಶ್ವಸಂಸ್ಥೆಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೆ ಅಪರಾಧಿ ಪರಾರಿ
ಗದಗ: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೆ ಶಿಕ್ಷೆಗೆ ಗುರಿಯಾದ ಅಪರಾಧಿಯೊಬ್ಬ ಕಟಕಟೆಯಿಂದ ತಪ್ಪಿಸಿಕೊಂಡಿರುವ ಘಟನೆ ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಗುರುವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಗಜೇಂದ್ರಗಡದ ಪಾಂಡುರಂಗ ಗುಡಿ ಸಮೀಪದ ನಿವಾಸಿ ಚಾಂದಲಿಂಗಪ್ಪ ಸುನಂದಾ ಬಾರಕೇರ ಎಂಬ ಅಪರಾಧಿ ತಪ್ಪಿಸಿಕೊಂಡಿದ್ದಾನೆ. ಈತನ ವಿರುದ್ಧ ಗದಗ ಪ್ರಧಾನ ದಿವಾಣಿ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ಕಲಂ ೧೩೮ ಎನ್.ಐ. ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು, ಗುರುವಾರ ಸಂಜೆ 4 ಗಂಟೆ ಸುಮಾರಿಗೆ ತೀರ್ಪು ಪ್ರಕಟಿಸಿದ್ದರು. ನ್ಯಾಯಾಲಯದ ಆದೇಶ ಪ್ರತಿಗೆ ಆರೋಪಿಯಿಂದ ಸಹಿ ಪಡೆದು, ಆದೇಶದ ಪ್ರತಿ ನೀಡಿ, ಕಟಕಟೆಯಲ್ಲಿ ನಿಲ್ಲುವಂತೆ ಸೂಚಿಸಿದಾಗ ಚಾಂದಲಿಂಗಪ್ಪ ಎಸ್.ಬಾರಕೇರ ನ್ಯಾಯಾಲಯದಿಂದ ಪರಾರಿಯಾಗಿದ್ದಾನೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.