ರಾಷ್ಟ್ರೀಯ

6 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

Pinterest LinkedIn Tumblr


ಭೋಪಾಲ್: 23 ವರ್ಷದ ಮಹಿಳೆ ಆರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಧ್ಯಪ್ರದೇಶದ ಶಿಯೋಪುರದ ಆಸ್ಪತ್ರೆಯಲ್ಲಿ ಮಹಿಳೆ ಮಕ್ಕಳಿಗೆ ಜನ್ಮ ನೀಡಿದ್ದು, ಕಡಿಮೆ ತೂಕವಿದ್ದ ಕಾರಣ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಿವಿಲ್ ಸರ್ಜನ್ ಡಾ.ಆರ್.ಬಿ.ಗೋಯಲ್, ಬಡೋದ್ ನಿವಾಸಿ ಮೂರ್ತಿ ಮಾಲಿ ಎಂಬವರು ಶನಿವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆಗೆ ಇದು ಮೊದಲ ಹೆರಿಗೆಯಾಗಿದ್ದು, ಗರ್ಭ ಧರಿಸಿದ ಏಳನೇ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಮಕ್ಕಳ ತೂಕ ಕಡಿಮೆ ತೂಕ ಹೊಂದಿದ್ದವು ಎಂದು ತಿಳಿಸಿದ್ದಾರೆ.

ಆರರಲ್ಲಿ ಎರಡು ಹೆಣ್ಣು ಮಕ್ಕಳು ಸಾವನ್ನಪ್ಪಿವೆ. ಇನ್ನುಳಿದ ನಾಲ್ಕು ಮಕ್ಕಳು 390 ರಿಂದ 450 ಗ್ರಾಂ ತೂಕ ಹೊಂದಿವೆ ನವಜಾತ ಶಿಶುಗಳನ್ನು ತೀವ್ರನಿಗಾಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಮಹಿಳೆಗೆ ಸಹಜ ಹೆರಿಗೆಯಾಗಿದ್ದರಿಂದ ಆರೋಗ್ಯವಾಗಿದ್ದಾರೆ.

ಅವಳಿ ಮಕ್ಕಳು ಜನಿಸೋದು ಸಾಮಾನ್ಯವಾಗಿ ನೋಡಿರುತ್ತೇವೆ. ಕೆಲವೊಮ್ಮೆ ಮೂರು ಮತ್ತು ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಬಗ್ಗೆ ಕೇಳಿರುತ್ತೇವೆ. ಆದ್ರೆ ಒಂದೇ ಬಾರಿಗೆ ಆರು ಮಕ್ಕಳಿಗೆ ಜನ್ಮ ನೀಡಿರುವ ಪ್ರಕರಣಗಳು ವಿರಳ. ಇನ್‍ಫಿರ್ಟಿಲಿಟಿ ಚಿಕಿತ್ಸೆಯಲ್ಲಿ ಈ ರೀತಿ ಮಹಿಳೆ ಮಕ್ಕಳಿಗೆ ಜನ್ಮ ನೀಡುವ ಸಾಧ್ಯತೆಗಳಿರುತ್ತವೆ. ಆದ್ರೆ ಈ ಮಹಿಳೆ ಮೊದಲ ಹೆರಿಗೆಯಲ್ಲಿ ಆರು ಮಕ್ಕಳಿಗೆ ಜನ್ಮ ನೀಡಿರೋದು ಆಶ್ಚರ್ಯ ಉಂಟು ಮಾಡಿದೆ ಎಂದು ಸ್ತ್ರೀ ರೋಗ ತಜ್ಞೆ ಡಾ.ಮಿತಾ ಅಗರವಾಲ್ ಹೇಳುತ್ತಾರೆ.

Comments are closed.