ರಾಷ್ಟ್ರೀಯ

ಅಯೋಧ್ಯೆಯ 5 ಎಕರೆ ಜಾಗದಲ್ಲಿ ಮಸೀದಿ, ಆಸ್ಪತ್ರೆ, ಗ್ರಂಥಾಲಯ ಸ್ಥಾಪನೆ

Pinterest LinkedIn Tumblr


ನವದೆಹಲಿ: ದಶಕಗಳಷ್ಟು ಹಳೆಯ ರಾಮಮಂದಿರ-ಬಾಬ್ರಿ ಮಸೀದಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ನೀಡಿರುವ ಅಂತಿಮ ತೀರ್ಪಿನ ಅನ್ವಯ ಉತ್ತರಪ್ರದೇಶ ಸರ್ಕಾರ ಸುನ್ನಿ ವಕ್ಫ್ ಬೋರ್ಡ್ ಗೆ ನೀಡಿರುವ ಐದು ಎಕರೆ ಜಾಗವನ್ನು ಸ್ವೀಕರಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ಮಂಡಳಿ, ನಮಗೆ ನೀಡಿರುವ ಐದು ಎಕರೆ ಜಾಗದಲ್ಲಿ ಮಸೀದಿ ಹೊರತುಪಡಿಸಿದಂತೆ ಈ ಸ್ಥಳದಲ್ಲಿ ಇಂಡೋ-ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರ, ಆಸ್ಪತ್ರೆ (ಚಾರಿಟೇಬಲ್) ಮತ್ತು ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಲಾಗುವುದು ಎಂದು ತಿಳಿಸಿದೆ.

ಮಂಡಳಿಯ ಸಭೆಯಲ್ಲಿ 5 ಎಕರೆ ಜಾಗವನ್ನು ಸ್ವೀಕರಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಮಂಡಳಿ ಅಧ್ಯಕ್ಷ ಝುಫರ್ ಫಾರೂಖಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಮಸೀದಿ ಸಮೀಪ ಇಂಡೋ ಇಸ್ಲಾಮಿಕ್ ಸಂಶೋಧನಾ ಕೇಂದ್ರ, ಸಾರ್ವಜನಿಕ ಗ್ರಂಥಾಲಯ, ಚಾರಿಟೇಬಲ್ ಆಸ್ಪತ್ರೆ ಹಾಗೂ ಇನ್ನಿತ ಬಹುಪಯೋಗಿ ಕಾರ್ಯಗಳಿಗಾಗಿ ಸ್ಥಳವನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

Comments are closed.