ರಾಷ್ಟ್ರೀಯ

ಅಮೆರಿಕಾ ಅಧ್ಯಕ್ಷರು ತಮ್ಮ ಚುನಾವಣಾ ಪ್ರಚಾರಕ್ಕೆ ಭಾರತದ ಮಣ್ಣನ್ನು ಬಳಸಿಕೊಳ್ಳುತ್ತಿದ್ದಾರೆ: ಕಾಂಗ್ರೆಸ್

Pinterest LinkedIn Tumblr

ಮುರ್ಷಿದಾಬಾದ್: ಭಾರತಕ್ಕೆ ಭೇಟಿ ನೀಡುತ್ತಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೋಟಿಗಟ್ಟಲೆ ಹಣವನ್ನು ವ್ಯಯಿಸುತ್ತಿದ್ದಾರೆ. ಆದರೆ, ಅಮೆರಿಕಾ ಅಧ್ಯಕ್ಷರು ತಮ್ಮ ಚುನಾವಣಾ ಪ್ರಚಾರಕ್ಕೆ ಭಾರತದ ಮಣ್ಣನ್ನು ಬಳಸಿಕೊಳ್ಳುತ್ತಿದ್ದಾರೆಂದು ಕಾಂಗ್ರೆಸ್ ಹೇಳಿದೆ.

ಈ ಕುರಿತು ಹೇಳಿಕೆ ನೀಡಿರುವ ಲೋಕಸಭಾ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿಯವರು, ಟ್ರಂಪ್ ಭೇಟಿಯಿಂದ ಭಾರತ ಏನನ್ನು ಪಡೆದುಕೊಳ್ಳಲಿದೆ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಭಾರತ ನಮಸ್ತೆ ಟ್ರಂಪ್ ನಡೆಸುತ್ತಿದೆ. ಟ್ರಂಪ್ ಅವರನ್ನು ಸಂತೋಷಪಡಿಸಲು ಮೋದಿಯವರು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಮೋದಿಯವರು ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ 1 ಕೋಟಿ ಜನರನ್ನು ಸೇರಿಸಲಿದ್ದಾರೆಂದು ಹೇಳಿದ್ದಾರೆಂದು ಟ್ರಂಪ್ ಹೇಳಿಕೆ ನೀಡಿದ್ದಾರೆ. ಇದರ ಅಗತ್ಯವೇನಿದೆ? ಟ್ರಂಪ್ ಏನು ಶ್ರೀರಾಮನಲ್ಲ. ಆದರೂ ಕೇಂದ್ರ ಸರ್ಕಾರವೇಕೆ ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರು ಭಾರತದ ಮಣ್ಣನ್ನು ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅಮೆರಿಕಾದಲ್ಲಿ ಗುಜರಾತ್ ಮೂಲದ ಸಾಕಷ್ಟು ಜನರು ವಾಸವಿದ್ದಾರೆ. ಅವರ ಮತಗಳು ಟ್ರಂಪ್ ಅವರಿಗೆ ಅತ್ಯಂತ ಮುಖ್ಯವಾಗಿದೆ. ಭಾರತ ಭೇಟಿ ವೇಳೆ ವ್ಯಾಪಾರ ಒಪ್ಪಂದಗಳಿಲ್ಲ ಎಂದು ಟ್ರಂಪ್ ಸ್ಪಷ್ಟವಾಗಿ ಹೇಳಿದ್ದಾರೆ ಂದು ಹೇಳಿದ್ದಾರೆ.

Comments are closed.