ರಾಷ್ಟ್ರೀಯ

ಉಮರ್ ಅಬ್ಧುಲ್ಲಾ, ಫಾರೂಖ್ ಅಬ್ದೂಲ್ಲಾ ಮತ್ತು ಮುಫ್ತಿ ಮೆಹಬೂಬಾ ಶೀಘ್ರ ಬಿಡುಗಡೆಗೆ ಪ್ರಾರ್ಥಿಸುತ್ತೇನೆ: ರಾಜನಾಥ್ ಸಿಂಗ್

Pinterest LinkedIn Tumblr


ಹೊಸದಿಲ್ಲಿ: ಗೃಹ ಬಂಧನದಲ್ಲಿರುವ ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಉಮರ್ ಅಬ್ಧುಲ್ಲಾ, ಫಾರೂಖ್ ಅಬ್ದೂಲ್ಲಾ ಮತ್ತು ಮುಫ್ತಿ ಮೆಹಬೂಬಾ ಅವರ ಶೀಘ್ರ ಬಿಡುಗಡೆಗಾಗಿ ಪ್ರಾರ್ಥಿಸುತ್ತೇನೆ ಎಂದು ರಾಷ್ಟ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಸಂದರ್ಭದಲ್ಲಿ ಉಮರ್ ಅಬ್ಧುಲ್ಲಾ, ಫಾರೂಖ್ ಅಬ್ದೂಲ್ಲಾ ಮತ್ತು ಮುಫ್ತಿ ಮೆಹಬೂಬಾ ಸೇರಿದಂತೆ ಕಾಶ್ಮೀರದ ಹಲವು ರಾಜಕಾರಣಿಗಳನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಈ ಗೃಹ ಬಂಧನ ಇಂದಿಗೂ ಮುಂದುವರಿದಿದೆ.

ಸುದ್ದಿವಾಹಿನಿಯೊಂದಕ್ಕೆ ಮಾತನಾಡುವ ವೇಳೆ ರಾಜನಾಥ್ ಸಿಂಗ್ ಅವರು ಈ ಮಾತನ್ನು ಹೇಳಿದರು. ಕಾಶ್ಮೀರದಲ್ಲಿ ಸದ್ಯ ಶಾಂತಿ ನೆಲೆಸಿದೆ. ಪರಿಸ್ಥಿತಿ ಸುಧಾರಿಸಿದೆ. ಈ ಹಿನ್ನಲೆಯಲ್ಲಿ ರಾಜಕೀಯ ನಾಯಕರನ್ನು ಬಿಡುಗಡೆ ಮಾಡುವ ಬಗ್ಗೆಯೂ ನಿರ್ಧಾರ ಕೈಗೊಳ್ಳುತ್ತೇವೆ ಎಂದ ಅವರು ಸರಕಾರ ಯಾರಿಗೂ ಕಿರುಕುಳ ನೀಡಿಲ್ಲ. ಭದ್ರತೆಯ ಕಾರಣಕ್ಕಾಗಿ ಮಾತ್ರ ಕೆಲ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು ಎಂದರು.

Comments are closed.