ರಾಷ್ಟ್ರೀಯ

ಫ್ಲೈ ಓವರ್ ನಿಂದ ಕಾರು ಕೆಳಗೆ ಬಿದ್ದು ಯುವ ಹೋಟೆಲ್ ಉದ್ಯಮಿ ಸಾವು

Pinterest LinkedIn Tumblr


ಹೈದರಾಬಾದ್: ಅತೀ ವೇಗದಲ್ಲಿ ಚಲಾಯಿಸುತ್ತಿದ್ದ ಕಾರು ಫ್ಲೈ ಓವರ್ ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಪರಿಣಾಮ 27 ವರ್ಷದ ಯುವ ಹೋಟೆಲ್ ಉದ್ಯಮಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಸುಕಿನ ವೇಳೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಯುವ ಉದ್ಯಮಿ ಮೊಹಮ್ಮದ್ ಸೋಹೈಲ್ (27ವರ್ಷ) ಎಂದು ಗುರುತಿಸಲಾಗಿದೆ. ಸೋಹೈಲ್ ಕಾರು ಚಾಲಕನ ಸಮೀಪ ಕುಳಿತಿದ್ದು, ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಅತಿ ವೇಗದಲ್ಲಿದ್ದ ಕಾರು ಸ್ಕಿಡ್ ಆಗಿ ಫ್ಲೈ ಓವರ್ ನಿಂದ ಕೆಳಗೆ ಬಿದ್ದ ಪರಿಣಾಮ ಸೋಹೈಲ್ ಸಾವನ್ನಪ್ಪಿರುವುದಾಗಿ ಪೊಲೀಸ್ ಇನ್ಸ್ ಪೆಕ್ಟರ್ ಕೆ.ಚಂದ್ರಶೇಖರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ. ಕಳೆದ ವರ್ಷ ನವೆಂಬರ್ ನಲ್ಲಿಯೂ ಫ್ಲೈಓವರ್ ನಿಂದ ಕಾರು ಕೆಳಗೆ ಬಿದ್ದ ಘಟನೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದರು.

Comments are closed.