ರಾಷ್ಟ್ರೀಯ

5ನೇ ಹೆಣ್ಣು ಮಗುವಿಗೆ ತಂದೆಯಾದ ಶಾಹೀದ್ ಶಾಫ್ರಿದಿ

Pinterest LinkedIn Tumblr


ಹೊಸದಿಲ್ಲಿ: ಜನಸಂಖ್ಯಾ ಸ್ಫೋಟದ ಸಮಸ್ಯೆಯು ಕೇವಲ ಭಾರತವನ್ನಷ್ಟೇ ಅಲ್ಲದೆ ನೆರೆಯ ಪಾಕಿಸ್ತಾನ ರಾಷ್ಟ್ರವನ್ನು ಕಾಡುತ್ತಿದೆ. ಕಡು ಬಡತನದಿಂದಾಗಿ ಜನರು ಒಂದು ಹೊತ್ತಿನ ಊಟಕ್ಕಾಗಿ ಪರದಾಡುವಂತಾಗಿದೆ. ಈ ನಡುವೆ ಪಾಕಿಸ್ತಾನ ಮಾಜಿ ನಾಯಕ ಹಾಗೂ ‘ಬೂಮ್ ಬೂಮ್’ ಖ್ಯಾತಿಯ ಶಾಹೀದ್ ಶಾಫ್ರಿದಿ, ಐದನೇ ಹೆಣ್ಣು ಮಗುವಿಗೆ ಅಪ್ಪನಾಗಿದ್ದಾರೆ.

ಪ್ರೇಮಿಗಳ ದಿನಾಚರಣೆಯಂದು ಶಾಹೀದ್ ಆಫ್ರಿದಿ ಪತ್ನಿ ನಾದಿಯಾ ಆಫ್ರಿದಿ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪ್ರಸ್ತುತ ವಿಚಾರವನ್ನು ಸ್ವತ: ಶಾಹೀದ್ ಆಫ್ರಿದಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸಲು ವಿಶ್ವಸಂಸ್ಥೆ ವ್ಯಾಪಕ ಕ್ರಮ ಕೈಗೊಳ್ಳುತ್ತಿರುವ ಮಧ್ಯೆ ಪಾಕಿಸ್ತಾನದಲ್ಲಿ ಹೆಚ್ಚು ಜನಪ್ರಿಯತೆ ಸಾಧಿಸಿರುವ ಕ್ರಿಕೆಟಿಗನೊಬ್ಬ ಐದನೇ ಹೆಣ್ಣು ಮಗುವಿಗೆ ಅಪ್ಪನಾಗಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಅದರಲ್ಲೊಬ್ಬ ಶಾಹೀದ್ ಆಫ್ರಿದಿ ಗಂಡು ಮಗುವನ್ನು ಬಯಸುತ್ತಿದ್ದು, ಗಂಡು ಮಗು ಜನಿಸುವ ವರೆಗೂ ಈ ಪ್ರಕ್ರಿಯೆ ನಿಲ್ಲಿಸಲ್ಲ ಎಂದು ಕಿಡಿ ಕಾರಿದ್ದಾರೆ. ಈ ಪ್ರಕ್ರಿಯೆಯಲ್ಲಿ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡವನ್ನು ರಚಿಸಲಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.

ಶಾಹೀದ್ ಆಫ್ರಿದಿಗೆ ಅಕ್ಸಾ, ಅನ್ಷಾ, ಅಜ್ವಾ ಮತ್ತು ಅಸ್ಮಾರಾ ಎಂಬ ಹೆಸರಿನ ಹೆಣ್ಣು ಮಕ್ಕಳಿದ್ದಾರೆ. ಇದೀಗ ಜನಿಸಿರುವ ಹೆಣ್ಣು ಮಗುವಿಗೆ ಏನು ನಾಮಕರಣ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. \

ಹಿಂದೊಮ್ಮೆ ತಮ್ಮ ಹೆಣ್ಣು ಮಕ್ಕಳಿಗೆ ಹೊರಂಗಣ ಮೈದಾನದಲ್ಲಿ ಆಡಲು ಅನುವು ಮಾಡಿಕೊಡುವುದಿಲ್ಲ. ಏನೇ ಇದ್ದರೂ ಒಳಾಂಗಣ ಕ್ರೀಡಾಂಗಣದಲ್ಲಿ ಆಡಬೇಕು ಎಂಬ ಶಾಹೀದ್ ಆಫ್ರಿದಿ ನಿಯಂತ್ರಣ ಹೇರಿರುವುದು ಕೆಂಗಣ್ಣಿಗೆ ಗುರಿಯಾಗಿಸಿತ್ತು.

ಈ ಮಧ್ಯೆ ಮಗಳು ಭಾರತೀಯ ಸಂಪ್ರದಾಯದಂತೆ ಆರತಿ ಮಾಡುತ್ತಿರುವುದನ್ನು ಗಮನಿಸಿದ ಶಾಹೀದ್ ಆಫ್ರಿದಿ ಟಿವಿಯನ್ನೇ ಒಡೆದು ಹಾಕಿದ್ದೆ ಎಂದು ಹೇಳಿಕೊಂಡಿದ್ದರು. ಇದು ಭಾರತದಲ್ಲೂ ವ್ಯಾಪಕ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿತ್ತು.

ಏತನ್ಮಧ್ಯೆ ಭಾರತ ಹಾಗೂ ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಪುನರಾರಂಭಿಸಬೇಕು ಎಂದು ಶಾಹೀದ್ ಆಫ್ರಿದಿ ಬಯಿಸಿದ್ದಾರೆ.

Comments are closed.