ರಾಷ್ಟ್ರೀಯ

ಗೆಳೆಯನ ಮನೆಗೆ ಕರೆದುಕೊಂಡು ಹೋಗಿ ವಿವಾಹಿತ ಮಹಿಳೆಯ ಅತ್ಯಾಚಾರ!

Pinterest LinkedIn Tumblr


ಹೈದರಾಬಾದ್: ಮಹಿಳೆಯನ್ನು ಅತ್ಯಾಚಾರ ಮಾಡಿದಲ್ಲದೇ ಜೀವ ಬೆದರಿಕೆ ಹಾಕಿದ್ದ ಆರೋಪದ ಮೇರೆಗೆ ಮೊಘಲ್‍ಪುರ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

ಶಿವ (28) ಮತ್ತು ಬಸವಾ ರಾಜು (30) ಬಂಧಿತ ಆರೋಪಿಗಳು. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಮೊಘಲ್‍ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?
23 ವರ್ಷದ ವಿವಾಹಿತ ಮಹಿಳೆ ಮತ್ತು ಆರೋಪಿಗಳು ನಗರದ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಮಂಗಳವಾರ ಆರೋಪಿ ಶಿವ ಕೆಲಸದ ನೆಪದಲ್ಲಿ ಸಂತ್ರಸ್ತೆಯನ್ನು ಆಕೆಯ ಮನೆಯಿಂದಲೇ ಕರೆದುಕೊಂಡು ಹೋಗಿದ್ದಾನೆ. ಆದರೆ ಆತ ಸಂತ್ರಸ್ತೆಯನ್ನು ಬೈಕಿನಲ್ಲಿ ಮತ್ತೊಬ್ಬ ಆರೋಪಿ ರಾಜು ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಈ ವೇಳೆ ಆರೋಪಿ ರಾಜು ಸಂತ್ರಸ್ತೆಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಇದಕ್ಕೆ ಒಪ್ಪದಿದ್ದರೆ ಪತಿ ಮತ್ತು ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಮತ್ತೆ ಬುಧವಾರ ಆರೋಪಿ ರಾಜು ಸಂತ್ರಸ್ತೆಯ ಮನೆಗೆ ಹೋಗಿ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಡ ಹಾಕಿದ್ದಾನೆ. ಆಗ ಸಂತ್ರಸ್ತೆ ಅದಕ್ಕೆ ನಿರಾಕರಿಸಿದ್ದಳು. ನಂತರ ರಾಜು ಪತಿ ಮತ್ತು ಸಂಬಂಧಿಕರಿಗೆ ಅತ್ಯಾಚಾರದ ಘಟನೆಯ ಬಗ್ಗೆ ಹೇಳುವುದಾಗಿ ಬೆದರಿಕೆ ಹಾಕಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಕೊನೆಗೆ ಸಂತ್ರಸ್ತೆ ಜೋರಾಗಿ ಕೂಗಿಕೊಂಡಿದ್ದಾಳೆ. ಆಗ ನೆರೆಹೊರೆಯವರು ಆಕೆಯ ಮನೆಗೆ ಬಂದು ಆರೋಪಿ ರಾಜುನನ್ನು ಹಿಡಿದು ಥಳಿಸಿದ್ದಾರೆ. ಸದ್ಯಕ್ಕೆ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಮೊಘಲ್‍ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

Comments are closed.