ರಾಷ್ಟ್ರೀಯ

ಕೊರೊನಾ ವೈರಸ್: ಪುತ್ರಿಯ ವಿವಾಹಕ್ಕೆ ಇಂಡಿಯಾಕ್ಕೆ ಬರಲಾಗದ ಚೀನಾ ದಂಪತಿ

Pinterest LinkedIn Tumblr


ಮಿಡ್ನಾಪೂರ್: ಕೊರೋನಾ ವೈರಸ್ ಪರಿಣಾಮದಿಂದ ಮಗಳ ಮದುವೆಗೆ ಚೀನಾದಿಂದ ಭಾರತಕ್ಕೆ ಬರಲಾಗದೆ ಪೋಷಕರು ಹತಾಶರಾದ ಘಟನೆ ನಡೆದಿದೆ.

7 ವರ್ಷಗಳ ಹಿಂದೆ ಭಾರತದ ಯುವಕನಿಗೂ , ಚೀನಾದ ಯುವತಿಗೂ ಪ್ರೇಮಾಂಕುರವಾಗಿ ಫೆಬ್ರವರಿ 5ರ ಬುಧವಾರದಂದು ವಿವಾಹವಾಗಲು ನಿಶ್ಚಯಿಸಿದ್ದರು. ಅದರಂತೆ ಬಂಗಾಳದ, ಪೂರ್ವ ಮಿಡ್ನಾಪೂರ್ ನ ಯುವಕನ ಮನೆಯಲ್ಲಿ ಭರ್ಜರಿ ಸಿದ್ದತೆಯೂ ನಡೆದಿತ್ತು. ಆದರೇ ಚೀನಾದಲ್ಲಿದ್ದ ಯುವತಿ ಪೋಷಕರು ಕೊರೋನಾ ವೈರಸ್ ಕಾರಣದಿಂದ ಮದುವೆ ಸಮಾರಂಭಕ್ಕೆ ಭಾರತಕ್ಕೆ ಬರಲಾಗದೆ ಹತಾಶರಾಗಿದ್ದಾರೆ.

ಕೊರೊನಾ ವೈರಸ್ ಹಿನ್ನಲೆಯಲ್ಲಿ ಭಾರತ ಮತ್ತು ಚೀನಾದ ನಡುವೆ ವಿಮಾನ ಸೇವೆ ರದ್ದುಪಡಿಸಲಾಗಿದೆ. ಈ ಕಾರಣದಿಂದ ಮೊದಲೇ ನಿಗದಿಯಾಗಿದ್ದ ನನ್ನ ಮದುವೆ ಸಮಾರಂಭಕ್ಕೆ ಪೋಷಕರು ಬರಲಾಗಲಿಲ್ಲ. ಆದರೂ ಅವರು ಸಂತುಷ್ಠರಾಗಿದ್ದಾರೆ. ಚೀನಾಕ್ಕೆ ದಂಪತಿ ಸಹಿತ ಹೋಗಬೇಕೆಂಬ ಆಸೆಯಿದೆ. ಆದರೆ ಯಾವಾಗ ಎಂದು ತಿಳಿಯುತ್ತಿಲ್ಲ. ಎಂದು ಮದುಮಗಳು ಜಿಯಾಖಿ ಮಾಧ್ಯಮಕ್ಕೆ ತಿಳಿಸಿದ್ದಾಳೆ.

ಜಿಯಾಕಿ ಪತಿ ಪಿಂಟು ಮಾತನಾಡಿ, ಮದುವೆಯಾದ ತಕ್ಷಣ ಚೀನಾಕ್ಕೆ ತೆರಳಿ ಕಾರ್ಯಕ್ರವೊಂದರಲ್ಲಿ ಭಾಗವಹಿಸಬೇಕಾಗಿತ್ತು. ಆದರೇ ಕೊರೋನಾ ಪರಿಣಾಮದಿಂದ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಹತಾಶೆ ತೋಡಿಕೊಂಡರು.

Comments are closed.