ರಾಷ್ಟ್ರೀಯ

ನಿರ್ಭಯಾ ಅಪರಾಧಿಗಳಿಗೆ ಕೊನೆಯ 7 ದಿನ ಅವಕಾಶ ನೀಡಿದ ಹೈಕೋರ್ಟ್

Pinterest LinkedIn Tumblr


ನವದೆಹಲಿ:ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳು ಒಂದು ವಾರದೊಳಗೆ ಉಳಿದ ಎಲ್ಲಾ ಕಾನೂನು ಅವಕಾಶಗಳನ್ನು ಬಳಸಿಕೊಳ್ಳಬೇಕು. ನಂತರ ವಿಚಾರಣಾಧೀನ ಕೋರ್ಟ್ ಮರಣದಂಡನೆ ಪ್ರಕ್ರಿಯೆ ಆರಂಭಿಸಲಿ ಎಂದು ದಿಲ್ಲಿ ಕೋರ್ಟ್ ಬುಧವಾರ ತೀರ್ಪು ನೀಡಿದೆ.

ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ದೋಷಿಗಳ ಗಲ್ಲುಶಿಕ್ಷೆ ಜಾರಿಗೆ ಅನಿರ್ದಿಷ್ಟಾವಧಿ ತಡೆ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಹೈಕೋರ್ಟ್ ಈ ತೀರ್ಪು ಪ್ರಕಟಿಸಿದೆ.

ಆದರೆ ಪ್ರತ್ಯೇಕವಾಗಿ ಗಲ್ಲಿಗೇರಿಸಲು ಅವಕಾಶ ನೀಡಬೇಕೆಂಬ ಕೇಂದ್ರದ ಮನವಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ದಿಲ್ಲಿ ಕೈದಿ ಕಾನೂನು ಪ್ರಕಾರ, ಒಂದು ವೇಳೆ ಒಬ್ಬ ದೋಷಿಯ ಕ್ಷಮಾದಾನ ಅರ್ಜಿ ಬಾಕಿ ಇದ್ದರೆ, ಉಳಿದ ದೋಷಿಗಳನ್ನು ಗಲ್ಲಿಗೇರಿಸಬಹುದು ಎಂದು ಹೇಳಿಲ್ಲ ಎಂದು ಜಸ್ಟೀಸ್ ಸುರೇಶ್ ಕೈಟ್ ವಿಚಾರಣೆ ವೇಳೆ ತಿಳಿಸಿರುವುದಾಗಿ ವರದಿ ಹೇಳಿದೆ.

Comments are closed.