
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆ.1ರಂದು ಮಂಡಿಸಿದ ಬಜೆಟ್ ಭಾಷಣವು 11 ಲಕ್ಷಕ್ಕೂ ಅಧಿಕ ಟ್ವೀಟ್ಗಳ ಮೂಲಕ ದಾಖಲೆ ನಿರ್ಮಿಸಿದೆ.
ಬರೋಬ್ಬರಿ 2 ಗಂಟೆ 40 ನಿಮಿಷಗಳ ಕಾಲ ನಿರಂತರ ಭಾಷಣ ಮಾಡಿದ ಬಳಿಕ ಆಯಾಸದಿಂದ ಅವರು ಕೊನೆಯ 2 ಪುಟಗಳನ್ನು ಓದಲೇ ಇಲ್ಲ.
“ಯೂನಿಯನ್ ಬಜೆಟ್ 2020′ ಎಂಬ ಹ್ಯಾಶ್ಟ್ಯಾಗ್ ಅಡಿ ಟ್ವೀಟ್ಗಳನ್ನು ಮಾಡಲಾಗಿದೆ. ಟ್ವೀಟ್ ಮಾಡಿದವರೆಲ್ಲ ಬಜೆಟ್ ಬಗ್ಗೆ ಬಗ್ಗೆ ಪರ-ವಿರೋಧ ಅಭಿಪ್ರಾಯ ಮಂಡನೆ ಮಾಡಿದ್ದಾರೆ. ಭಾಷಣಕ್ಕೆ ವ್ಯಕ್ತವಾಗಿರುವ ಪ್ರತಿಕ್ರಿಯೆಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ರಾಜಕೀಯ ನಾಯಕರ ವಿರುದ್ಧ ಲೇವಡಿಯ ಮಾತುಗಳಿವೆ.
ಹಂಟರ್ ಎಂಬ ಹೆಸರಿನಲ್ಲಿ ಟ್ವೀಟ್ ಮಾಡಿದವರು ಮಧ್ಯಮ ವರ್ಗದವರು ಬಜೆಟ್ ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಅಶುತೋಶ್ ಸಿಂಗ್ ಎಂಬವರು “ರಾಹುಲ್ ಗಾಂಧಿಯವರು ಇನ್ನೂ ಬಜೆಟ್ ತಿಳಿದುಕೊಳ್ಳುತ್ತಿದ್ದಾರೆ’ ಎಂದು ಬರೆದಿದ್ದಾರೆ.
ಅದಕ್ಕೆ ಲೋಕಸಭೆಯಲ್ಲಿ ಕುಳಿತು ಏನನ್ನೋ ನೋಡುತ್ತಿರುವ ಫೋಟೋ ಹಾಕಲಾಗಿದೆ. ಟ್ವೀಟ್ ದಾಖಲೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ವಿಟರ್ ಇಂಡಿಯಾದ ಅಮಿತ್ ತ್ರಿಪಾಠಿ, ಬಜೆಟ್ ಭಾಷಣ ಮತ್ತು ಅದರ ವಿಶ್ಲೇಷಣೆಯನ್ನು ಹೆಚ್ಚಿನ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದಿದ್ದಾರೆ.
Comments are closed.