ರಾಷ್ಟ್ರೀಯ

ಮಾರಕ ವೈರಸ್​ ಕೊರೊನಾ ಪೀಡಿತ ಮೂರನೇ ಪ್ರಕರಣ ಕೇರಳದ ಕಾಸರಗೋಡಿನಲ್ಲಿ ಪತ್ತೆ !

Pinterest LinkedIn Tumblr

ಕಾಸರಗೋಡು: ಮಾರಕ ವೈರಸ್​ ಕೊರೊನಾ ಪೀಡಿತ ಮೂರನೇ ಪ್ರಕರಣ ಕೇರಳದ ಕಾಸರಗೋಡಿನಲ್ಲಿ ಪತ್ತೆಯಾಗಿದೆ.

ಕೇರಳ ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಈ ಬಗ್ಗೆ ಮಾಹಿತಿ ನೀಡಿದ್ದು, ಕಾಸರಗೋಡು ಜಿಲ್ಲೆ ಕಂಜನಾಗಡ್​ ಎಂಬಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಪಾಸಿಟಿವ್​ ಫಲಿತಾಂಶ ಬಂದಿದೆ ಎಂದು ತಿಳಿಸಿದರು.

ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅವರು ಚೀನಾದ ವುಹಾನ್​ನಿಂದ ಮರಳಿದ್ದಾರೆ. ಚಿಕಿತ್ಸೆ ಮುಂದುವರಿದಿದ್ದು ತೀವ್ರ ನಿಗಾ ಇಡಲಾಗಿದೆ ಎಂದರು.

Comments are closed.