ರಾಷ್ಟ್ರೀಯ

ಪ್ರಿಯಕರನ ಜೊತೆ ಓಡಿಹೋಗಿದ್ದ ಪತ್ನಿಯೊಂದಿಗೆ ಸೆಕ್ಸ್ ನಡೆಸಿದ ಪತಿ ನಂತರ ಮಾಡಿದ್ದು ಘನಘೋರ ಕಾರ್ಯ !

Pinterest LinkedIn Tumblr

ಚಂಡೀಗಢ: ಪ್ರಿಯಕರನ ಜೊತೆಗಿದ್ದ ಪತ್ನಿಯ ಜೊತೆ ಸೆಕ್ಸ್ ಮಾಡಿ ನಂತರ ಪತಿಯೇ ಕೊಲೆ ಮಾಡಿರುವ ಘಟನೆ ಪಂಜಾಬ್‍ನ ಖರಾರ್ ನಲ್ಲಿ ನಡೆದಿದೆ.

ಸುಖ್ವಿಂದರ್ ಕೌರ್ (25) ಮೃತ ಮಹಿಳೆ. ಪತಿಯೇ ಮೊಬೈಲ್ ಫೋನ್ ಚಾರ್ಜರ್ ವೈರ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಘಟನಾ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಾಧಾರದ ಮೇರೆಗೆ ಮೃತ ಮಹಿಳೆಯ ಪತಿ ಹರ್ಜಿಂದರ್ ಸಿಂಗ್‍ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಆತನ ವಿರುದ್ಧ ಐಪಿಸಿ ಸೆಕ್ಸನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಏನಿದು ಪ್ರಕರಣ?
ಮೃತ ಸುಖ್ವಿಂದರ್ ಕೌರ್ ಸೊಲಾಖಿಯಾನ್ ಗ್ರಾಮದ ಹರ್ಜಿಂದರ್ ಸಿಂಗ್ ಜೊತೆ ಮದುವೆಯಾಗಿದ್ದಳು. ಈ ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಮದುವೆಯಾದಾಗಿನಿಂದ ದಂಪತಿ ಮಧ್ಯೆ ಜಗಳ ನಡೆಯುತ್ತಿತ್ತು. ಆದ್ದರಿಂದ ಕೌರ್ ಪತಿಯ ಮನೆ ಬಿಟ್ಟು ಪ್ರಿಯಕರ ದಪಿಂದರ್ ಸಿಂಗ್ ಜೊತೆ ವಾಸಿಸುತ್ತಿದ್ದಳು.

ಕೌರ್ ಮತ್ತು ಪ್ರಿಯಕರ ದಪಿಂದರ್ ಸಿಂಗ್ ಇಬ್ಬರೂ 15 ದಿನಗಳ ಹಿಂದೆ ಗುರುದ್ವಾರ ರಸ್ತೆಯಲ್ಲಿ ತಾವಿಬ್ಬರೂ ಗಂಡ-ಹೆಂಡತಿ ಎಂದು ಸುಳ್ಳು ಹೇಳಿ ಒಂದು ಮನೆಯನ್ನು ಬಾಡಿಗೆಗೆ ಪಡೆದಿದ್ದರು. ದಪಿಂದರ್ ಸಿಂಗ್ ಗುರುವಾರ ಕೆಲಸಕ್ಕೆಂದು ಮನೆಯಿಂದ ಹೊರಹೋಗಿದ್ದನು. ಮಧ್ಯಾಹ್ನ ಮನೆಗೆ ಹಿಂದಿರುಗಿದಾಗ ಮೊಬೈಲ್ ಚಾರ್ಜರ್ ವೈರ್‌ನಿಂದ ಕೌರ್‌ನ ಕತ್ತು ಹಿಸುಕಿ ಕೊಲೆ ಮಾಡಿರುವುದನ್ನು ನೋಡಿದ್ದಾನೆ. ತಕ್ಷಣ ದಪಿಂದರ್ ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಹಿತಿ ತಿಳಿದು ಪೊಲೀಸ್ ಸಿಬ್ಬಂದಿ, ಇನ್ಸ್ ಪೆಕ್ಟರ್ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಫೊರೆನ್ಸಿಕ್ ಲ್ಯಾಬ್ ಸಿಬ್ಬಂದಿ ಅವರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಸ್ಥಳದಲ್ಲಿದ್ದ ಫಿಂಗರ್ ಪ್ರಿಂಟ್‍ಗಳ ಮಾದರಿಗಳನ್ನು ತೆಗೆದುಕೊಂಡಿದ್ದಾರೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದರು. ಇತ್ತ ಕೌರ್ ಪತಿ ಯಾವಾಗಲೂ ಜಗಳ ಮಾಡುತ್ತಿದ್ದನು. ಹೀಗಾಗಿ ಆಕೆ ಪತಿಯನ್ನು ಬಿಟ್ಟು ನನ್ನ ಜೊತೆ ಬಂದಿದ್ದಳು ಎಂದು ದಪಿಂದರ್ ಸಿಂಗ್ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.

ಸುಖ್ವಿಂದರ್ ಕೌರ್ ಮತ್ತು ಹರ್ಜಿಂದರ್ ಸಿಂಗ್ ಮದುವೆಯಾಗಿ 8 ವರ್ಷಗಳಾಗಿದೆ. ಆರೋಪಿ ಪತಿ ಸುಖ್ವಿಂದರ್ ಕೌರ್ ನನ್ನು ಎರಡನೇ ಮದುವೆಯಾಗಿದ್ದನು. ಮೊದಲನೆಯ ಪತ್ನಿ ಕೂಡ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಳು. ಅದೇ ರೀತಿ ಕೌರ್ ಕೂಡ ಪತಿಯಿಂದ ದೂರವಾಗಿ ಪ್ರಿಯಕರನ ಜೊತೆ ವಾಸಿಸುತ್ತಿದ್ದಳು.

ಗುರುವಾರ ಆರೋಪಿ ಪತಿ ಮದ್ಯವನ್ನು ಖರೀದಿಸಿ ಪತ್ನಿಯ ಪ್ರಿಯಕರನ ಮನೆಗೆ ಹೋಗಿದ್ದನು. ಅಲ್ಲಿ ಅವನು ಮದ್ಯಪಾನ ಮಾಡಿದ್ದಾನೆ. ಜೊತೆಗೆ ಪತಿಯ ಜೊತೆಗೆ ಲೈಂಗಿಕ ಸಂಬಂಧ ಹೊಂದಿದ್ದನು. ಕೊನೆಗೆ ಪತ್ನಿಯ ಜೊತೆ ಸೆಕ್ಸ್ ಮಾಡಿದ ನಂತರ ಕೊಲೆ ಮಾಡಿದ್ದಾನೆ. ಬಳಿಕ ಆರೋಪಿ ಪತಿ ಅಲ್ಲಿಂದ ಹೋಗಿದ್ದಾನೆ. ಆದರೆ ಆರೋಪಿ ಕೊಲೆ ಮಾಡಿ ಹೋಗುವ ಆತುರದಲ್ಲಿ ತನ್ನ ಹೆಲ್ಮೆಟ್ ಬಿಟ್ಟು ಹೋಗಿದ್ದನು. ಹೀಗಾಗಿ ಹೆಲ್ಮೆಟ್ ಮೂಲಕ ಆರೋಪಿ ಪತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

Comments are closed.