ರಾಷ್ಟ್ರೀಯ

ಹುಲಿಯಿಂದ ಪಾರಾಗಲು ಸತ್ತಂತೆ ಮಲಗಿದ

Pinterest LinkedIn Tumblr


ಮಹಾರಾಷ್ಟ್ರ: ಹುಲಿಯಿಂದ ಪಾರಾಗಲು ವ್ಯಕ್ತಿಯೊಬ್ಬ ಸತ್ತಂತೆ ನಟಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ. ವ್ಯಕ್ತಿಯ ಸಮಯಪ್ರಜ್ಞೆಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.

ಮಹಾರಾಷ್ಟ್ರದ ಭಂದಾರಾ ಜಿಲ್ಲೆಯು ಕಳೆದ ಶನಿವಾರ ಮಾನವ-ಪ್ರಾಣಿ ಸಂಘರ್ಷಕ್ಕೆ ಸಾಕ್ಷಿಯಾಗಿತ್ತು. ಅದರಲ್ಲೂ ವ್ಯಕ್ತಿಯೊಬ್ಬ ಹುಲಿ ಬಾಯಿಯಿಂದ ಉಪಾಯದಿಂದ ಪಾರಾಗಿರುವ ಸನ್ನಿವೇಶವಂತೂ ಮೈ-ನವಿರೇಳಿಸುವಂತೆ ಮಾಡುತ್ತದೆ.

ಕಾಡಿನಿಂದ ನಾಡಿಗೆ ಬಂದ ಹುಲಿಯೊಂದನ್ನು ಓಡಿಸಲು ಗ್ರಾಮಸ್ಥರು ಪಟ್ಟ ಹರಸಾಹಸ ಪಟ್ಟಿದ್ದರು, ಈ ವೇಳೆ ಉದ್ರಿಕ್ತಗೊಂಡ ಹುಲಿ ಕೂಡ ಜನರ ಮೇಲೆರಗಿ ದಾಳಿ ಮಾಡಲು ಮುಂದಾಗಿತ್ತು. ಈ ಸಮಯದಲ್ಲಿ ವ್ಯಕ್ತಿಯೊಬ್ಬನನ್ನು ಎಳೆದು ಕೆಳಗೆ ಹಾಕಿದಾಗ ಆತ ಸಮಯಪ್ರಜ್ಞೆ ಮೆರೆದು ಶವದ ರೀತಿಯಲ್ಲಿ ನಟಿಸಿ ಅಲ್ಲೆ ಮಲಗುತ್ತಾನೆ. ಹುಲಿ ಮಾತ್ರ ಆತನ ಮೇಲೆಯೇ ಕುಳಿತಿರುತ್ತದೆ. ಈ ವೇಳೆ ಗ್ರಾಮಸ್ಥರು ಕಲ್ಲುಗಳನ್ನು ಎಸೆದಾಗ ಹುಲಿ ಗಾಬರಿಗೊಂಡು ಓಡಿ ಹೋಗುತ್ತದೆ. ಅದು ಹೋದಂತೆಯೇ ಸತ್ತಂತೆ ಮಲಗಿದ್ದ ವ್ಯಕ್ತಿ ಸಾವಿನ ದವಡೆಯಿಂದ ಪಾರಾದಂತೆ ನಿಟ್ಟುಸಿರು ಬಿಟ್ಟು ಏಳುತ್ತಾನೆ.

ಘಟನೆಯಲ್ಲಿ ಒಟ್ಟು ಮೂವರು ಮಂದಿ ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಬ್ರಹ್ಮಪುರಿ ಅರಣ್ಯ ವಲಯದಲ್ಲಿ ಶುಕ್ರವಾರ ಸಂಜೆ 42 ವರ್ಷದ ಮಹಿಳೆಯನ್ನು ಕೊಂದು ತಿಂದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಇನ್ನು ವಿಡಿಯೋವನ್ನು ಅರಣ್ಯಾಧಿಕಾರಿ ಪರ್ವೀನ್​ ಕಾಸ್ವಾನ್​ ಅವರು ಟ್ವಿಟರ್​ನಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದು, ಈವರೆಗೆ ಸುಮಾರು 26 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ

Comments are closed.