ರಾಷ್ಟ್ರೀಯ

ಕುದುರೆ ಏರಿ ಗಂಡನ ಮನೆಗೆ ಹೋದ ನವವಿವಾಹಿತ ಸಹೋದರಿಯರು

Pinterest LinkedIn Tumblr


ಭೋಪಾಲ್: ಮದುವೆ ಸಮಾರಂಭದಲ್ಲಿ ವರ ಕುದುರೆ ಏರಿ ಮದುವೆ ಮಂಟಪಕ್ಕೆ ಬರುವುದು ಸಾಮಾನ್ಯ. ಆದರೆ ಮಧ್ಯ ಪ್ರದೇಶದ ಖಂಡ್ವಾದಲ್ಲಿ ನವವಿವಾಹಿತ ಸಹೋದರಿಯರು ಕುದುರೆ ಏರಿ ಪತಿಯ ಮನೆಗೆ ಹೋಗಿದ್ದಾರೆ.

ಸಾಕ್ಷಿ ಮತ್ತು ದೃಷ್ಟಿ ಸಹೋದರಿಯರು ಕುದುರೆ ಏರಿ ತಮ್ಮ ಪತಿಯ ಮನೆಗೆ ಹೋಗಿದ್ದಾರೆ. ಇವರ ಮದುವೆ ಜನವರಿ 22 ರಂದು ನಡೆದಿದ್ದು, ಇಬ್ಬರು ಸಹೋದರಿಯರು ವಧುವಿನ ಉಡುಪನ್ನು ಧರಿಸಿ, ತಮ್ಮ ವಿವಾಹ ಮೆರವಣಿಗೆಯಲ್ಲಿ ಕುದುರೆ ಏರಿ ತಮ್ಮ ಪತಿಯ ಮನೆಗೆ ಹೋಗಿದ್ದಾರೆ.

ಪಾಟಿದಾರ್ ಮನೆತನದಲ್ಲಿ ಮದುವೆಯಾದವರು ಕುದುರೆ ಮೂಲಕವೇ ತಮ್ಮ ಪತಿಯ ಮನೆಗೆ ಹೋಗಬೇಕೆಂಬ ಸಂಪ್ರದಾಯವಿದೆ. ಹೀಗಾಗಿ ಸಹೋದರಿಯರು ಒಂದೇ ದಿನ ಮದುವೆಯಾಗಿದ್ದರು. ವಿಶೇಷವಾಗಿ ಇಬ್ಬರು ಕುದುರೆ ಏರಿ ತಮ್ಮ ತಮ್ಮ ಪತಿಯ ಮನೆಗೆ ಹೋಗಿದ್ದಾರೆ.

ಈ ಸಮುದಾಯದ ಭಾಗವಾಗಲು ನನಗೆ ಹೆಮ್ಮೆ ಇದೆ. ದೇಶದ ಮಹಿಳೆಯರಿಗೆ ಗೌರವ ನೀಡುವಂತೆ ಸಂಪ್ರದಾಯವನ್ನು ಅನುಸರಿಸಬೇಕು. ನಾವು ನಮ್ಮ ಸಂಪ್ರದಾಯವನ್ನು ಅನುಸರಿಸುತ್ತಿದ್ದೇವೆ ಎಂದು ವಧು ಸಾಕ್ಷಿ ಹೇಳಿದ್ದಾರೆ.

ಇದು 400-500 ವರ್ಷಗಳ ಹಳೆಯ ಸಂಪ್ರದಾಯವಾಗಿದೆ. ಈ ದೇಶದ ಹೆಣ್ಣುಮಕ್ಕಳನ್ನು ಸಮಾನವಾಗಿ ಪರಿಗಣಿಸಬೇಕು. ಈ ಮೂಲಕ ನಮ್ಮ ಸಂಪ್ರದಾಯವನ್ನು ಮುಂದುವರಿಸಬೇಕು. ನಮ್ಮ ಹೆಣ್ಣುಮಕ್ಕಳಿಗೆ ಗೌರವವನ್ನು ನೀಡುವಂತೆ ಇತರ ಹೆಣ್ಣುಮಕ್ಕಳಿಗೂ ಗೌರವ ಕೊಡಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ವಧು ತಂದೆ ಅರುಣ್ ಹೇಳಿದರು.

Comments are closed.