ರಾಷ್ಟ್ರೀಯ

ಹೆಂಡತಿಗೆ ಫೇಸ್ ಬುಕ್ ನಲ್ಲಿ 6 ಸಾವಿರ ಫಾಲೋವರ್ಸ್ – ಕಲ್ಲಿನಿಂದ ಜಜ್ಜಿ ಕೊಂದ ಪತಿ

Pinterest LinkedIn Tumblr


ಜೈಪುರ: ಮೊಬೈಲಿನಲ್ಲಿ ಸದಾ ಬ್ಯುಸಿ ಇರುತ್ತಿದ್ದ ಪತ್ನಿಯನ್ನು ಆಕೆಯ ಗಂಡ ಕೊಲೆಗೈದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

22 ವರ್ಷದ ರೇಶ್ಮಾ ಅಲಿಯಾಸ್ ನೈನಾ ಮಂಗಲಾನಿ ಕೊಲೆಯಾದ ಮಹಿಳೆ. ರೇಶ್ಮಾ ಪತಿ ಅಜಯ್ ಅಹಮದ್ ಅನ್ಸಾರಿ (26) ಪತ್ನಿಯನ್ನು ಕೊಂದು ಜೈಲು ಪಾಲಾಗಿದ್ದಾನೆ. ಸುತ್ತಾಡಲು ಎಂದು ಪತ್ನಿಯನ್ನು ಹೊರ ಕರೆ ತಂದ ಅಜಯ್ ಜೈಪುರ-ದೆಹಲಿ ಹೆದ್ದಾರಿಯಲ್ಲಿ ರೇಶ್ಮಾಳ ಕತ್ತು ಹಿಸುಕಿ ಕೊಲೆಗೈದಿದ್ದಾನೆ. ಪತ್ನಿ ಸಾವನ್ನಪ್ಪಿದ ಬಳಿಕ ಮೃತದೇಹದ ಗುರುತು ಪತ್ತೆಯಾಗದಿರಲೆಂದು ಮುಖವನ್ನು ಕಲ್ಲಿನಿಂದ ಜಜ್ಜಿ ವಿರೂಪಗೊಳಿಸಿದ್ದಾನೆ.

ಈ ಸಂಬಂಧ ಪತಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ತಾನೇ ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾನೆ. ಪತ್ನಿ ಫೇಸ್‍ಬುಕ್ ನಲ್ಲಿ ಆರು ಸಾವಿರ ಫಾಲೋವರ್ಸ್ ಗಳನ್ನು ಹೊಂದಿದ್ದಳು. ಹಾಗಾಗಿ ಸದಾ ಮೊಬೈಲಿನಲ್ಲಿಯೇ ಬ್ಯುಸಿ ಆಗಿರುತ್ತಿದ್ದರಿಂದ ಕೊಲೆಗೆ ಮುಂದಾದೆ ಎಂದು ಹೇಳಿದ್ದಾನೆ.

ತವರು ಮನೆಯಲ್ಲಿದ್ದ ಪತ್ನಿಯನ್ನು ಭಾನುವಾರ ಕರೆದುಕೊಂಡು ಬಂದಿದ್ದಾನೆ. ಹೊರಗೆ ಸುತ್ತಾಡೋಣ ಎಂದು ದಿನವೆಲ್ಲ ತಿರುಗಾಡಿದ್ದಾನೆ. ರಾತ್ರಿಯಾಗುತ್ತಿದ್ದಂತೆ ಹೆದ್ದಾರಿಯಲ್ಲಿ ರೇಶ್ಮಾಳನ್ನು ಕೊಲೆಗೈದಿದ್ದಾನೆ. ಪತ್ನಿ ಸದಾ ಫೋನ್ ನಲ್ಲಿ ಬ್ಯುಸಿ ಇರುತ್ತಿದ್ದರಿಂದ ರೇಶ್ಮಾಳನ್ನು ಅನುಮಾನಿಸುತ್ತಿದ್ದನು. ದಂಪತಿಗೆ ಮೂರು ತಿಂಗಳ ಗಂಡು ಮಗುವಿದೆ ಎಂದು ವರದಿಯಾಗಿದೆ.

Comments are closed.