ರಾಷ್ಟ್ರೀಯ

ಪ್ರಸಿದ್ಧ ಅಟ್ಲಾಸ್ ಸೈಕಲ್ ಕಂಪೆನಿಯ ಮಾಲಕರ ಹೆಂಡತಿ ಆತ್ಮಹತ್ಯೆ

Pinterest LinkedIn Tumblr


ನವದೆಹಲಿ: ಪ್ರಸಿದ್ಧ ಅಟ್ಲಾಸ್ ಸೈಕಲ್ ಕಂಪೆನಿಯ ಮಾಲಕರ ಪತ್ನಿ ಇಂದು ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೆಹಲಿಯಲ್ಲಿರುವ ಪ್ರತಿಷ್ಠಿತ ಔರಂಗಜೇಬ್ ಲೇನ್ ನಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ನೇಣುಬಿಗಿದುಕೊಂಡು ಸಾವಿಗೀಡಾಗಿರುವ ನತಾಶಾ ಕಪೂರ್ ಅವರು 70 ವರ್ಷಗಳಷ್ಟು ಹಳೆಯದಾಗಿರುವ ದೇಶದಲ್ಲೆಡೆ ಮನೆಮಾತಾಗಿರುವ ಅಟ್ಲಾಸ್ ಸೈಕಲ್ ಕಂಪೆನಿಯ ಮಾಲಕ ಸಂಜಯ್ ಕಪೂರ್ ಅವರ ಪತ್ನಿಯಾಗಿದ್ದಾರೆ.

ಇಲ್ಲಿನ ಗಂಗಾ ರಾಮ್ ಆಸ್ಪತ್ರೆಯಲ್ಲಿ ನತಾಶಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಿದ ಬಳಿಕ ಶವವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಲೋಧಿ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಅವರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.

ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ನತಾಶಾ ಅವರು ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಕುಟುಂಬ ಸದಸ್ಯರೆಲ್ಲರೂ ಚೆನ್ನಾಗಿರುವಂತೆ ಮನವಿ ಮಾಡಿಕೊಂಡಿದ್ದಾರೆ. ನತಾಶಾ ಅವರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಅವರ ಮಗ ಹಾಗೂ ಮಗಳು ಮನೆಯಲ್ಲಿದ್ದರು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಆದರೆ ನತಾಶಾ ಅವರು ಪತಿ ಸಂಜಯ್ ಕಪೂರ್ ಅವರು ಈ ಸಂದರ್ಭದಲ್ಲಿ ಮನೆಯಲ್ಲಿ ಇರಲಿಲ್ಲ.

Comments are closed.