ರಾಷ್ಟ್ರೀಯ

ಗರ್ಭಿಣಿಯನ್ನು 30 ಕಿ.ಮೀ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ದಾಖಲಿಸಿದ ವೈದ್ಯರು

Pinterest LinkedIn Tumblr


ಒಡಿಶಾ: ಪಲ್ಸ್ ಪೋಲಿಯೋ ಲಸಿಕೆ ಹಾಕಲು ಮಾವೋವಾದಿ ಪೀಡಿತ ಮಲ್ಕಂಗಿರಿ ಕುಗ್ರಾಮಕ್ಕೆ ತೆರಳಿದ್ದ ಯುವ ವೈದ್ಯರ ತಂಡವೊಂದು ತುಂಬು ಗರ್ಭಿಣಿ ಮಹಿಳೆಯನ್ನು 30 ಕಿ,ಮೀ ಸ್ಟ್ರೆಚ್ಚರ್ ನಲ್ಲಿ ಹೊತ್ತುಕೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಭಾನುವಾರ, ಮಲ್ಕಂಗೇರಿಯ ಕಲಿಮೆಲಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ವೈದ್ಯ ರಾಧೇಶ್ಯಂ ಜೆನಾ, ಕುರ್ಮನೂರ್ ಗ್ರಾಮಪಂಚಾಯಿತಿಗೆ ಒಳಪಟ್ಟ ಕೊಡಿಡುಲಗುಂಡಿ ಗ್ರಾಮಕ್ಕೆ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನಕ್ಕಾಗಿ ತಮ್ಮ ತಂಡದೊಂದಿಗೆ ತೆರಳಿದ್ದರು.

ಈ ವೇಳೆ ರಿನಾಮಾ ಬೇರ್ ಎಂಬ ಮಹಿಳೆ ತನ್ನ ಮನೆಯಲ್ಲಿ ಹೆರಿಗೆ ನೋವನ್ನು ಅನುಭವಿಸುತ್ತಿದ್ದಳು. ಕೂಡಲೇ ಚಿಕಿತ್ಸೆ ನೀಡಲು ಮುಂದಾದ ವೈದ್ಯರ ತಂಡ ಸೂಸೂತ್ರವಾಗಿ ಹೆರಿಗೆ ಮಾಡಿಸಿತು. ಆದರೇ ಅವಳಿ ಮಕ್ಕಳಿದ್ದ ಕಾರಣ ಹೆಚ್ಚಾಗಿ ರಕ್ತಸ್ರಾವವಾಗಲು ತೊಡಗಿದ್ದರಿಂದ ಮತ್ತು ವಾತಾವರಣ ಶುದ್ಧತೆ ಇಲ್ಲದ ಕಾರಣ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ಅನಿವಾರ್ಯತೆಯಿತ್ತು.

ಆದರೇ ಆ ಕುಗ್ರಾಮಕ್ಕೆ ಯಾವುದೇ ವಾಹನ ಸಂಪರ್ಕ ಹಾಗೂ ರಸ್ತೆಯಿಲ್ಲದ ಕಾರಣ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಒಯ್ಯಲು ಕೂಡಲೇ ಸಾಧ್ಯವಾಗಿರಲಿಲ್ಲ. ಮೊಬೈಲ್ ನೆಟ್ ವರ್ಕ್ ಕೂಡ ಸ್ಥಗಿತಗೊಂಡಿತ್ತು. ನಂತರದಲ್ಲಿ ಮಹಿಳೆಯ ಕುಟುಂಬದ ಇಬ್ಬರು ವ್ಯಕ್ತಿಗಳು ಮತ್ತು 6 ಜನ ವೈದ್ಯರ ತಂಡ ಆಕೆಯನ್ನು ಸ್ಟ್ರೆಚ್ಚರ್ ಮೂಲಕವೇ 30 ಕಿ.ಮೀ ಹೊತ್ತೊಯ್ದು ಕಲಿಮೆಳ ಪಟ್ಟಣದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಧ್ಯಾಹ್ನ 12 ಕ್ಕೆ ಹೊರಟ ತಂಡ ರಾತ್ರಿ 8 ಗಂಟೆಗೆ ಆಸ್ಪತ್ರೆಗೆ ತೆರಳಿ ಮತ್ತೊಂದು ಮಗುವನ್ನು ಸೂಸೂತ್ರವಾಗಿ ಹೆರಿಗೆ ಮಾಡಿಸಿತು. ಮಹಿಳೆ ಮತ್ತು ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಂದಿದೆ.

Comments are closed.