ರಾಷ್ಟ್ರೀಯ

ತನ್ನ ಉದ್ದ ಕೂದಲನ್ನು ಅಮ್ಮ ಕತ್ತರಿಸಿದ್ದಕ್ಕೆ ನೊಂದ ಬಾಲಕ ಆತ್ಮಹತ್ಯೆ

Pinterest LinkedIn Tumblr


ಚೆನ್ನೈ: ಸ್ಟೈಲ್ ಗಾಗಿ ತಲೆಗೂದಲು ಬೆಳೆಸಲು ತಾಯಿ ಒಪ್ಪಲಿಲ್ಲ ಎಂಬ ಕಾರಣಕ್ಕೆ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆನ್ನೈನ ಕುಂದ್ರತುರ್ ನಲ್ಲಿ ನಡೆದಿದೆ.

ಬಾಲಕನ ತಾಯಿ ಮೋಹನ ಚಿತ್ರೀಕರಣ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಬಾಲಕ ಕುಂದ್ರತುರ್ ನಲ್ಲಿ ಶಾಲೆಗೆ ಹೋಗುತ್ತಿದ್ದ.

ಪೊಂಗಲ್ ಹಬ್ಬದ ಸಮಯದಲ್ಲಿ ತಾಯಿಯನ್ನು ಭೇಟಿಯಾಗಲು ಬಾಲಕ ಹೋಗಿದ್ದ. ಆ ಸಮಯದಲ್ಲಿ ಮಗನ ಉದ್ದ ಕೂದಲನ್ನು ಕಂಡು ಆತನಿಗೆ ಬಯ್ದಿದ್ದರು. ಉದ್ದ ಕೂದಲನ್ನು ಕತ್ತರಿಸುವಂತೆ ಆಕೆ ಜೋರು ಮಾಡಿದ್ದಳು ಎನ್ನಲಾಗಿದೆ.

ನಂತರ ಭಾನುವಾರ ಮುಂಜಾನೆ ಹತ್ತಿರದ ಕ್ಷೌರದ ಅಂಗಡಿಗೆ ಕರೆದುಕೊಂಡು ಹೋಗಿ ಮಗನ ಉದ್ದ ಕೂದಲನ್ನು ಕತ್ತರಿಸಿದ್ದರು.

ಭಾನುವಾರ ರಾತ್ರಿ ಆಕೆ ಕೆಲಸ ಮುಗಿಸಿ ಮನೆಗೆ ಬಂದಾಗ ಆಘಾತ ಕಾದಿತ್ತು. ಹದಿಹರೆಯದ ಮಗ ಮನೆಯ ಛಾವಣಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಆತನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸದರೂ,ಅದಾಗಲೇ ಆತ ಮೃತಪಟ್ಟಿದ್ದ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.

Comments are closed.