ರಾಷ್ಟ್ರೀಯ

ಮಕರ ಜ್ಯೋತಿ ದರ್ಶನಕ್ಕೆ ಸಜ್ಜಾದ ಶಬರಿಮಲೆ

Pinterest LinkedIn Tumblr


ತಿರುವನಂತಪುರಂ: ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಬುಧವಾರದಂದು ಜ್ಯೋತಿ ರೂಪದಲ್ಲಿ ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಸಜ್ಜಾಗಿದೆ.

ಮಕರ ಜ್ಯೋತಿ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಮಾಲಾಧಾರಿಗಳು ಶಬರಿಮಲೆಗೆ ಆಗಮಿಸಿದ್ದಾರೆ. ಜತೆಗೆ ಭಕ್ತರು ಕೂಡ ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಹೀಗಾಗಿ ತಿರುವಾಂಕೂರು ದೇವಸ್ವಂ ಮಂಡಳಿ ರಕ್ಷಣೆ ಒತ್ತು ನೀಡಿ ಪೊಲೀಸ್‌ ಭದ್ರತೆಯನ್ನು ಹೆಚ್ಚಿಸಿದೆ. ಸನ್ನಿಧಾನವೊಂದರಲ್ಲೇ 15 ಡಿವೈಎಸ್‌ಪಿಗಳು, 36 ಸರ್ಕಲ್‌ ಇನ್ಸ್‌ಪೆಕ್ಟರ್‌ಗಳೊಂದಿಗೆ 1500 ಪೊಲೀಸ್‌ ಸಿಬ್ಬಂದಿ ಭದ್ರತೆಗಾಗಿ ನಿಯೋಜನೆಗೊಂಡಿದ್ದಾರೆ.

ಇದಲ್ಲದೆ, 70 ಮಂದಿಯ ಬಾಂಬ್‌ ನಿಷ್ಕ್ರಿಯ ಪಡೆ, 20 ಸಿಬ್ಬಂದಿಯ ಸಂವಹನ ಪಡೆಯನ್ನು ಸನ್ನಿಧಾನದಲ್ಲಿ ನಿಗಾ ಇರಿಸಲು ನೇಮಕ ಮಾಡಲಾಗಿದೆ. ರಾಷ್ಟ್ರೀಯ ನೈಸರ್ಗಿಕ ವಿಕೋಪ ನಿರ್ವಹಣಾ ದಳ, ಅಗ್ನಿಶಾಮಕ ದಳದ ಜತೆಗೆ ಗುಪ್ತಚರ ಸಿಬ್ಬಂದಿ ಕೂಡ ಮಫ್ತಿಯಲ್ಲಿದ್ದಾರೆ ಎಂದು ಮಂಡಳಿಯ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಸನ್ನಿಧಾನದ ಸುತ್ತಲಿನ ಹೋಟೆಲ್‌ಗಳಲ್ಲಿನ ಉಪಾಹಾರಗಳ ಗುಣಮಟ್ಟವನ್ನು ಕೂಡ ವಿಶೇಷ ನಿಗಾ ಮೂಲಕ ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಎರಡು ತಿಂಗಳ ಮಂಡಲ ಪೂಜೆ ಮತ್ತು ಮಕರವಿಳಕ್ಕು ಮಹೋತ್ಸವ ಜ.20ಕ್ಕೆ ಮುಕ್ತಾಯಗೊಳ್ಳಲಿದೆ , ಅಂದೇ ಅಯ್ಯಪ್ಪಸ್ವಾಮಿ ದೇವಸ್ಥಾನ ಬಾಗಿಲು ಮುಚ್ಚಲಿದೆ. ಮಾಸಿಕ ಪೂಜೆಗಾಗಿ (ಕುಂಭಂ) ಫೆ. 13 ರಂದು ದೇವಸ್ಥಾನದ ಬಾಗಿಲು ಪುನಃ ತೆರೆಯಲಿದೆ.

Comments are closed.