ರಾಷ್ಟ್ರೀಯ

41,800ಕ್ಕೆ ತಲುಪಿದ ಸೆನ್ಸೆಕ್ಸ್; ಮತ್ತೆ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದ ಭಾರತೀಯ ಷೇರುಮಾರುಕಟ್ಟೆ

Pinterest LinkedIn Tumblr

ನವದೆಹಲಿ: ಭಾರತೀಯ ಷೇರುಮಾರುಕಟ್ಟೆ ಮತ್ತೆ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದ್ದು, ಸೋಮವಾರದ ವಹಿವಾಟಿನ ಆರಂಭದಲ್ಲೇ 293.69 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ 41,800 ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಬರೆದಿದೆ.

ಕಳೆದ ಡಿಸೆಂಬರ್ 19ರ ವಹಿವಾಟಿನಲ್ಲೇ ಸೆನ್ಸೆಕ್ಸ್ 394 ಅಂಕಗಳ ಏರಿಕೆ ಕಾಣುವ ಮೂಲಕ ಸಾರ್ವಕಾಲಿಕೆ ದಾಖಲೆ ನಿರ್ಮಾಣ ಮಾಡಿದ್ದ ಸೆನ್ಸೆಕ್ಸ್ ಇಂದು ಮತ್ತೆ, 293.69 ಅಂಕಗಳ ಏರಿಕೆಯೊಂದಿಗೆ 41,800 ಅಂಕಗಳ ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಬರೆದಿದೆ. ನಿಫ್ಟಿ ಕೂಡ ಇಂದು ದಾಖಲೆಯ 73.65 ಅಂಕಗಳ ಏರಿಕೆ ಕಾಣುವ ಮೂಲಕ 12,330.55 ಅಂಕಗಳಿಗೆ ಏರಿಕೆಯಾಗಿದ್ದು, ಶೇ.0.60ರಷ್ಟು ಏರಿಕೆ ಕಂಡಿದೆ.

ಇಂದಿನ ವಹಿವಾಟಿನಲ್ಲಿ ಔಷಧ ಮತ್ತು ರಿಯಾಲಿಟಿ ಸೆಕ್ಟರ್ ಗಳ ಷೇರುಮೌಲ್ಯ ಏರಿಕೆಯಾಗಿದ್ದು, ಉಕ್ಕು ವಿಭಾಗದ ಸಂಸ್ಥೆಯ ಷೇರುಗಳ ಮೌಲ್ಯ ಕೂಡ ಏರಿಕೆ ಕಂಡಿದೆ. ಪ್ರಮುಖವಾಗಿ ಸನ್ ಫಾರ್ಮಾ, ಐಟಿಸಿ, ಎಚ್‌ಸಿಎಲ್ ಟೆಕ್, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್ ಮತ್ತು ಕೊಟಕ್ ಬ್ಯಾಂಕ್ ಗಳ ಷೇರುಗಳದಲ್ಲಿ ಏರಿಕೆ ಕಂಡುಬಂದಿದೆ.

ಟಿಸಿಎಸ್, ಮಾರುತಿ, ಎಚ್ ಡಿಎಫ್ ಸಿ ಷೇರುಗಳ ಮೌಲ್ಯದಲ್ಲಿ ಅಲ್ಪ ಚೇತರಿಕೆ ಕಂಡುಬಂದಿದೆ. ಇನ್ನು ಹಾಂಕಾಂಗ್, ಶಾಂಘೈ ಮತ್ತು ಸಿಯೋಲ್ ಷೇರುಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ಭಾರತೀಯ ಷೇರುಮಾರುಕಟ್ಟೆ ಚೇತರಿಕೆಗೆ ಕಾರಣ ಎನ್ನಲಾಗಿದೆ.

Comments are closed.