ರಾಷ್ಟ್ರೀಯ

ಅಕ್ರಮ ಸಂಬಂಧ ಪ್ರಶ್ನಿಸಿದ ಅತ್ತೆಯನ್ನು ಹಾವು ಕಚ್ಚಿಸಿ ಕೊಲ್ಲಿಸಿದ ಸೊಸೆ !

Pinterest LinkedIn Tumblr

ನವದೆಹಲಿ: ಅಕ್ರಮ ಸಂಬಂಧ ಪ್ರಶ್ನಿಸಿದ ಅತ್ತೆಯನ್ನು ಸೊಸೆಯೊಬ್ಬಳು ಹಾವು ಕಚ್ಚಿಸಿ ಕೊಲ್ಲಿಸಿದ ಘಟನೆ ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಲ್ಪನಾ ಎಂಬಾಕೆಯೇ ತನ್ನ ಅತ್ತೆ ಸುಬೋಧ್‌ ದೇವಿ ಎಂಬವರನ್ನು ಕೊಂದು ಹಾಕಿದ ಮಹಿಳೆ.

ಗಂಡ ಸಚಿನ್‌ ಹಾಗೂ ಅವನ ಸಹೋದರ ಚಿರಂತನ್‌ ಇಬ್ಬರೂ ಭಾರತೀಯ ಸೇನೆಯಲ್ಲಿ ಯೋಧರು. ಮಾವ ರಾಜೇಶ್‌ ಕೂಡ ಕೆಲಸ ನಿಮಿತ್ತ ಹೊರಗಡೆಯೇ ಇರುತ್ತಿದ್ದರು. ಹಾಗಾಗಿ ಅತ್ತೆ ಮತ್ತು ಸೊಸೆ ಮಾತ್ರ ಮನೆಯಲ್ಲಿ ಇರುತ್ತಿದ್ದರು.

ಈ ವೇಳೆ ಮನೀಶ್‌ ಎಂಬಾತನ ಜೆತೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ ಈಕೆ, ಸತತವಾಗಿ ಮೊಬೈನ್‌ನಲ್ಲಿ ಮಾತನಾಡುತ್ತಿದ್ದುದ್ದನ್ನು ಅತ್ತೆ ವಿರೋಧಿಸುತ್ತಿದ್ದರು. ತನ್ನ ಪ್ರೇಮಕ್ಕೆ ಅಡ್ಡವಾಗುತ್ತಿದ್ದ ಅತ್ತೆಯನ್ನು ಕೊಲ್ಲಲು ತನ್ನ ಪ್ರಿಯಕರನೊಂದಿಗೆ ಅಲ್ಪನಾ ಸಂಚು ರೂಪಿಸಿದ್ದಳು. ಅದರಂತೆ ಅತ್ತೆಗೆ ಮ್ಯಾಂಗೋ ಮಿಲ್ಕ್ ಶೇಕ್‌ನಲ್ಲಿ ನಿದ್ದೆ ಮಾತ್ರೆ ಬರಿಸಿ ನೀಡಿದ್ದಳು. ಅತ್ತೆ ನಿದ್ದೆಗೆ ಜಾರುತ್ತಿದ್ದಂತೆ, ಆಕೆಯ ಕತ್ತುಹಿಸುಕಿ ಕೊಲೆ ಮಾಡಿದ್ದಳು. ಬಳಿಕ ಹಾವನ್ನು ತಂದು, ಅದು ಕಾಲಿಗೆ ಕಚ್ಚುವಂತೆ ಮಾಡಿದ್ದಳು. ಹೀಗಾಗಿ ಇದು ಹಾವು ಕಚ್ಚಿದ ಸಾವು ಎಂದೇ ನಂಬಲಾಗಿತ್ತು. ಇದೆಲ್ಲಾ ಆಗಿದ್ದು 2019ರ ಜೂನ್‌ 2ರಂದು.

ಕೆಲ ದಿನಗಳ ಬಳಿಕ ಈಕೆಯ ವರ್ತನೆಯನ್ನು ಅನುಮಾನಗೊಂಡು ಅಳಿಯಂದಿರು ಪೊಲೀಸ್‌ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಕೊಲೆಯಾದ ದಿನದಂದು ಅಲ್ಪನಾ ಹಾಗೂ ಆಕೆಯ ಪ್ರಿಯತಮನ ನಡುವೆ 124 ಕರೆಗಳು ಹೋಗಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಅಲ್ಪನಾ ಹಾಗೂ ಪ್ರಿಯತಮನ ಸ್ನೇಹಿತ ಕೃಷ್ಣಾ ನಡುವೆ 19 ಕರೆಗಳು ಹೋಗಿವೆ. ಪ್ರಕರಣ ಬೇಧಿಸಿದ ಪೊಲೀಸರು, ಈ ಜ.4ರಂದು ಮೂವರನ್ನೂ ಬಂಧಿಸಿದ್ದಾರೆ.

Comments are closed.