ರಾಷ್ಟ್ರೀಯ

ಫೆ.8ಕ್ಕೆ ದೆಹಲಿಯ ವಿಧಾನಸಭಾ ಚುನಾವಣೆ ಚುನಾವಣೆ; 11ರಂದು ಮತ ಎಣಿಕೆ

Pinterest LinkedIn Tumblr


ಹೊಸದಿಲ್ಲಿ: ದೆಹಲಿಯ ವಿಧಾನಸಭಾ ಚುನಾವಣೆಗೆ ದಿನ ನಿಗದಿಯಾಗಿದೆ. ಫೆಬ್ರವರಿ 8ಕ್ಕೆ ಚುನಾವಣೆ ನಡೆಯಲಿದೆ ಎಂದು ಚುನಾವನಾ ಆಯೋಗ ತಿಳಿಸಿದೆ.

ಜನವರಿ 21ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಜನವರಿ 22ರಂದು ನಾಮಪತ್ರ ಸಲ್ಲಿಕೆಯಾಗಲಿದೆ. ಜನವರಿ 24ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು ಫೆಬ್ರವರಿ ಎಂಟರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಫೆಬ್ರವರಿ 11ರಂದು ಮತಎಣಿಕೆ ಕಾರ್ಯ ನಡೆಯಲಿದೆ.

70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಸದ್ಯ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 67 ಸ್ಥಾನಗಳನ್ನು ಗೆದ್ದು ಆಡಳಿತ ನಡೆಸುತ್ತಿದೆ.

ದೆಹಲಿಯಲ್ಲಿ ಒಟ್ಟು 1.46 ಮತದಾರರಿದ್ದು, ಅದರ ಪೈಕಿ 80.55 ಲಕ್ಷ ಪುರುಷರು ಮತ್ತು 66.35 ಲಕ್ಷ ಮಹಿಳಾ ಮತದಾರಿದ್ದಾರೆ.

ದೆಹಲಿ ವಿಧಾನಸಭೆಯ ಅವಧಿ ಫೆಬ್ರವರಿ 22ರಂದು ಪೂರ್ಣಗೊಳ್ಳಲಿದ್ದು, ಅದರ ಒಳಗೆ ನೂತನ ಸರಕಾರ ರಚನೆಯಾಗಬೇಕು.

Comments are closed.