ರಾಷ್ಟ್ರೀಯ

ಗುಜರಾತ್: ಸರಕಾರಿ ಆಸ್ಪತ್ರೆಗಳಲ್ಲಿ 219 ನವಜಾತ ಶಿಶುಗಳ ಮರಣ

Pinterest LinkedIn Tumblr


ಅಹಮದಾಬಾದ್: ರಾಜಸ್ಥಾನದ ಕೋಟಾ ಸರಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆ ಏರುತ್ತಿರುವ ಕಳವಳಕಾರಿ ವಿಚಾರದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದಲ್ಲೂ ಸಹ ನವಜಾತ ಶಿಶುಗಳು ಸಾವನ್ನಪ್ಪಿರುವ ಸುದ್ದಿ ಹೊರಬಿದ್ದಿದೆ.

ಇಲ್ಲಿನ ರಾಜ್ ಕೋಟ್ ಮತ್ತು ಅಹಮದಾಬಾದ್ ನಲ್ಲಿರುವ ಎರಡು ಸರಕಾರಿ ಆಸ್ಪತ್ರೆಗಳಲ್ಲಿ ಡಿಸೆಂಬರ್ ತಿಂಗಳೊಂದರಲ್ಲೇ 219 ಶಿಶುಗಳು ಸಾವನ್ನಪ್ಪಿವೆ. ರಾಜ್ ಕೋಟ್ ನಲ್ಲಿ 134 ಮಕ್ಕಳು ಸಾವನ್ನಪ್ಪಿದ್ದರೆ, ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ 85 ಮಕ್ಕಳು ಸಾವನ್ನಪ್ಪಿದ್ದಾರೆ. ರಾಜ್ಯದ ಅತೀದೊಡ್ಡ ಸರಕಾರಿ ಆಸ್ಪತ್ರೆಗಳಲ್ಲಿ ಒಂದಾಗಿರುವ ಇಲ್ಲಿ ಕಳೆದ ಮೂರು ತಿಂಗಳುಗಳಲ್ಲಿ 253 ನವಜಾತ ಶಿಶುಗಳು ಸಾವನ್ನಪ್ಪಿರುವುದು ಆಘಾತಕಾರಿ ವಿಷಯವಾಗಿದೆ.

ಇನ್ನು ರಾಜ್ ಕೋಟ್ ಸಿವಿಲ್ ಆಸ್ಪತ್ರೆಯಲ್ಲಿನ ವಿಚಾರ ಇನ್ನಷ್ಟು ಭಯಾನಕವಾಗಿದೆ. ಇಲ್ಲಿ 2019ರಲ್ಲಿ 1235 ನವಜಾತ ಶಿಶುಗಳು ಮರಣಹೊಂದಿರುವುದುದಾಗಿ ತಿಳಿದುಬಂದಿದೆ. ಇವುಗಳಲ್ಲಿ ಡಿಸೆಂಬರ್ ತಿಂಗಳಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಶಿಶು ಮರಣ ಸಂಭವಿಸಿದ್ದರೆ, ಅಕ್ಟೋಬರ್ ತಿಂಗಳಿನಲ್ಲಿ ಎರಡನೇ ಅತೀ ಹೆಚ್ಚು ಶಿಶುಮರಣ ಸಂಭವಿಸಿದೆ.

ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ರಾಜ್ ಕೋಟ್ ನವರೇ ಆಗಿರುವ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರು ಮಾಧ್ಯಮದವರಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Comments are closed.