ರಾಷ್ಟ್ರೀಯ

ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಂ-ಹಿಂದೂ ಇಬ್ಬರ ಮೇಲೆ ಪರಿಣಾಮ ಬೀರಲಿದ್ದು, ಕಾಯ್ದೆಯನ್ನು ಜನತೆ ತಿರಸ್ಕರಿಸಿ:ಕೇಜ್ರಿವಾಲ್

Pinterest LinkedIn Tumblr

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಂ ಹಾಗೂ ಹಿಂದೂ ಇಬ್ಬರ ಮೇಲೆ ಪರಿಣಾಮ ಬೀರಲಿದ್ದು, ಅನಗತ್ಯವಾಗಿ ಜಾರಿಗೆ ಬಂದಿರುವ ಕಾಯ್ದೆಯನ್ನು ಜನತೆ ತಿರಸ್ಕರಿಸುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ

ಟೌನ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದಿಂದ ಬರುವ ಎರಡು ಕೋಟಿ ಹಿಂದೂಗಳಿಗೆ ಏಲ್ಲಿ ಜಾಗ ನೀಡೋದು ಎಂದು ಪ್ರಶ್ನಿಸಿದ ಅವರು, ಈ ಕಾಯ್ದೆ ಸಂಪೂರ್ಣವಾಗಿ ಅನಗತ್ಯವಾಗಿದ್ದು, ಈ ಕಾನೂನು ನಮಗೆ ಬೇಡ ಎಂದರು.

ಕೇಂದ್ರ ಸರ್ಕಾರ ಮೊದಲು ಇಲ್ಲಿನ ನಾಗರಿಕರ ಬಗ್ಗೆ ಎಚ್ಚರಿಕೆ ವಹಿಸಬೇಕು, ನಂತರ ಇತರ ರಾಷ್ಟ್ರಗಳ ಜನರ ಬಗ್ಗೆ ಗಮನ ಹರಿಸಲಿ ದೇಶಕ್ಕೆ ಅನಗತ್ಯವಾಗಿರುವ ಈ ಕಾಯ್ದೆಗಿಂತಲೂ ಮೊದಲು ನಮ್ಮ ಮಕ್ಕಳಿಗೆ ಉದ್ಯೋಗ ನೀಡಬೇಕಾದ ಅಗತ್ಯತೆ ಹೆಚ್ಚಾಗಿದೆ ಎಂದು ಹೇಳಿದರು.

ಡಿಸೆಂಬರ್ 31, 2014ರೂ ಮುಂಚಿತವಾಗಿ ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನದಿಂದ ಭಾರತಕ್ಕೆ ಬರುವ ಹಿಂದೂ, ಸಿಖ್, ಬೌದ್ದ, ಜೈನ, ಪಾರ್ಸಿ, ಕ್ರಿಶ್ಚಿಯನ್ ಸಮುದಾಯಗಳಿಗೆ ದೇಶದ ಪೌರತ್ವ ನೀಡುವುದಾಗಿ ಕಾಯ್ದೆ ಹೇಳುತ್ತದೆ ಆದರೆ,ಈ ಕಾಯ್ದೆ ಜಾರಿಗೆ ಬರುವುದರಿಂದ ಮುಸ್ಲಿಂರಿಗೆ ಮಾತ್ರವಲ್ಲ ಹಿಂದೂಗಳ ಮೇಲೂ ಪರಿಣಾಮ ಬೀರಲಿದೆ ಎಂದು ಕೇಜ್ರಿವಾಲ್ ತಿಳಿಸಿದರು.

Comments are closed.