
ಕೋಲ್ಕತ್ತಾ: ಮದುವೆಯಾಗಿ ಮೂರು ದಿನ ಕಳೆದರೂ ಪತಿಯ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಾಣದಿದ್ದಕ್ಕೆ ಪತ್ನಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಕಳೆದ ವಾರ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‍ನ ಯುವತಿ ಅದೇ ಪ್ರದೇಶದ ಯುವಕನ ಜೊತೆ ಮದುವೆಯಾಗಿದ್ದಾಳೆ. ಮರುದಿನ ದಂಪತಿಗೆ ಕುಟುಂಬದವರು ಮೊದಲ ರಾತ್ರಿಯನ್ನು ಏರ್ಪಡಿಸಿದ್ದರು. ನವವಧು ಅನೇಕ ಕನಸುಗಳನ್ನು ಇಟ್ಟುಕೊಂಡು ಫಸ್ಟ್ ನೈಟ್ ರೂಮಿಗೆ ಹಾಲು ತೆಗೆದುಕೊಂಡು ಹೋಗಿದ್ದಾಳೆ. ಪತಿ ರೂಮಿನಲ್ಲಿ ಹಾಸಿಗೆ ಮೇಲೆ ಕುಳಿತುಕೊಂಡಿದ್ದನು.
ಪತಿ ಹಾಲು ಕುಡಿದು ತಕ್ಷಣ ಮಲಗಿಕೊಂಡಿದ್ದಾನೆ. ಇದನ್ನು ನೋಡಿದ ಪತ್ನಿ ಅಚ್ಚರಿಗೊಂಡಿದ್ದಾಳೆ. ನಂತರ ಪತಿಯನ್ನು ಎಬ್ಬಿಸಲು ಪ್ರಯತ್ನ ಮಾಡಿದ್ದಾಳೆ. ಆಗ ಪತಿ “ನನಗೆ ಅಂತಹ ಭಾವನೆಗಳಿಲ್ಲ” ಎಂದು ಹೇಳಿ ಮಲಗಿಕೊಂಡಿದ್ದಾನೆ. ಪತಿಯ ಮಾತು ಕೇಳಿ ಶಾಕ್ ಆದ ಪತ್ನಿ ಕೆಲವು ದಿನಗಳ ನಂತರ ಸರಿ ಹೋಗಬಹುದು ಎಂದು ಸುಮ್ಮನಾಗಿದ್ದಾಳೆ.
ಆದರೆ ಮೂರು ರಾತ್ರಿ ಕಳೆದರು ಪತಿಯ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಜೊತೆ ಹೊಸದಾಗಿ ಮದುವೆಯಾಗಿದ್ದರು ಪತ್ನಿಯನ್ನು ನಿರ್ಲಕ್ಷ್ಯ ಮಾಡುತ್ತಿದ್ದನು. ತಕ್ಷಣ ಪೋಷಕರಿಗೆ ಫೋನ್ ಮಾಡಿ ಮೂರು ರಾತ್ರಿ ರೂಮಿನಲ್ಲಿ ನಡೆದುದ್ದನ್ನು ಹೇಳಿಕೊಂಡಿದ್ದಾಳೆ.
ಇತ್ತ ಅತ್ತೆ ಮನೆಯವರು ನನ್ನ ಮಗನಲ್ಲಿ ಯಾವುದೇ ದೋಷವಿಲ್ಲ, ನೀನು ಸುಮ್ಮನೇ ಸುಳ್ಳು ಆರೋಪ ಮಾಡುತ್ತಿದ್ದೀಯಾ ಎಂದು ವಾದಿಸಿದ್ದಾರೆ. ಇದರಿಂದ ಕೋಪಗೊಂಡ ಪತ್ನಿ ಪೊಲೀಸ್ ಠಾಣೆಗೆ ಹೋಗಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Comments are closed.