ರಾಷ್ಟ್ರೀಯ

ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ 287 ಕೋಟಿ ರೂ. ಕಾಣಿಕೆ

Pinterest LinkedIn Tumblr


ಅಹ್ಮದ್‌ನಗರ: ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ 2019ರಲ್ಲಿ ದಾಖಲೆಯ 287 ಕೋಟಿ ರೂ. ಸಂಗ್ರಹವಾಗಿದೆ. 2018ರಲ್ಲಿ 285 ಕೋಟಿ ರೂ.

ಸಂಗ್ರವಾಗಿತ್ತು. ಈ ಮೂಲಕ 2018ರ ದಾಖಲೆ ಮುರಿಯಲಾಗಿದೆ ಎಂದು ಶಿರ್ಡಿ ಶ್ರೀ ಸಾಯಿಬಾಬಾ ಟ್ರಸ್ಟ್‌ (ಎಸ್‌ಎಸ್‌ಎಸ್‌ಟಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಕ್‌ ಮುಗ್ಲೀಕರ್‌ ಹೇಳಿದ್ದಾರೆ.

2018 ಡಿ.31ರಿಂದ ಜ.1ರವರೆಗೆ 287 ಕೋಟಿ ರೂ. ಹರಿದು ಬಂದಿದೆ. ಈ ಪೈಕಿ 217 ಕೋಟಿ ರೂ.ನಗದು ರೂಪದಲ್ಲಿ ದೊರೆತಿದೆ. ಶೇ.33ರಷ್ಟು ಹಣ ಡಿಮ್ಯಾಂಡ್‌ ಡ್ರಾಫ್ಟ್, ಡೆಬಿಟ್‌ ಕಾರ್ಡ್‌, ವಿದೇಶಿ ಕರೆನ್ಸಿ, ಮನಿ ಆರ್ಡರ್‌, ಆನ್‌ಲೈನ್‌ ವರ್ಗಾವಣೆ, ಚೆಕ್‌ ಮೂಲಕ ಬಂದಿದೆ. ಇದರೊಂದಿಗೆ 391 ಕೆಜಿ ಬೆಳ್ಳಿ, 19 ಕೆಜಿ ಬಂಗಾರವನ್ನು ಕಾಣಿಕೆಯಾಗಿ ನೀಡಲಾಗಿದೆ. ದೇವಸ್ಥಾನದ ಹುಂಡಿಯಲ್ಲಿ 156 ಕೋಟಿ ರೂ. ಹಾಗೂ ನಗದು ಕೌಂಟರ್‌ನಲ್ಲಿ 60 ಕೋಟಿ ರೂ. ಸಂಗ್ರಹವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 2019ರಲ್ಲಿ ರಾಷ್ಟ್ರಪತಿ ರಮಾನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಒಂದು ಕೋಟಿಗೂ ಅಧಿಕ ಭಕ್ತರು ಶಿರಡಿ ಸಾಯಿಬಾಬಾ ದರ್ಶನ ಪಡೆದಿದ್ದಾರೆ.

Comments are closed.