ರಾಷ್ಟ್ರೀಯ

ನಕಲಿ ನೋಟು ಗ್ಯಾಂಗ್ ಬಂಧನ-1.74 ಕೋಟಿ ರೂ. ವಶ

Pinterest LinkedIn Tumblr


ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಕಲಿ ನೋಟುಗಳ ಜಾಲವನ್ನು ಪೊಲೀಸರು ಬೇಧಿಸಿದ್ದು, ಐದು ಮಂದಿಯ ಗ್ಯಾಂಗ್ ಅನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ. ಖಚಿತ ಮಾಹಿತಿ ಆಧಾರದ ಮೇಲೆ ದಿಲ್ಲಿಯ ವಿಶೇಷ ಪೊಲೀಸ್ ಪಡೆ ನಡೆಸಿದ ದಾಳಿಯಲ್ಲಿ ಭಾರತೀಯ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದು, ಸುಮಾರು 1ಕೋಟಿ 73 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ ಎಂದು ವರದಿ ವಿವರಿಸಿದೆ.

ಈ ಗ್ಯಾಂಗ್ ಭಾರತೀಯ ನಕಲಿ ನೋಟುಗಳನ್ನು ಮುದ್ರಿಸಿ ದಿಲ್ಲಿಯಲ್ಲಿ ಕೆಲ ಸಮಯ ಚಲಾವಣೆ ಮಾಡಿದ್ದಾರೆನ್ನಲಾಗಿದೆ. ಬಂಧಿತರಿಂದ ಲ್ಯಾಪ್ ಟಾಪ್, ಪ್ರಿಂಟಿಂಗ್ ಯಂತ್ರ ಹಾಗೂ 2000 ಸಾವಿರ ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಷ್ಟೇ ಅಲ್ಲ ಅಮೆರಿಕದ ನಕಲಿ ನೋಟುಗಳನ್ನು ಸಹ ಬಂಧಿತ ಗ್ಯಾಂಗ್ ನಿಂದ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಇವರಲ್ಲಿ ನಕಲಿ ನೋಟು ಜಾಲದ ಕಿಂಗ್ ಪಿನ್ ತಬ್ರೇಜ್ ಲಾಂಗ್ಡಾ, ಪ್ರಮುಖ ಸೂತ್ರಧಾರಿ ಶೋಯಬ್ ಮಲಿಕ್, ಗ್ರಾಫಿಕ್ ಡಿಸೈನರ್ ದಿನೇಶ್ ಮಲಿಕ್, ದಿಲ್ಲಿ ಹಿಂದೂ ಕಾಲೇಜು ವಿದ್ಯಾರ್ಥಿ ಉಮ್ರಾನ್ ಅಮ್ರೋಹಿ ಹಾಗೂ ರಘುರಾಜ್ ಬಂಧಿತರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.