
ನವದೆಹಲಿ:ಭಾರತೀಯ ಸೇನೆ ನಾಯಿಗಳ ಯುನಿಟ್ ಅನ್ನು ಅಪ್ಡೇಟ್ ಮಾಡಲಾಗಿದೆ. ಈ ಯುನಿಟ್ ನ ನೇತೃತ್ವ ವಹಿಸಿರುವ ಲೆಫ್ಟನೆಂಟ್ ಕರ್ನಲ್ ವಿ. ಕಮಲ್ ರಾಜ್ ನಾಯಿಗಳಿಗಾಗಿಯೇ ಒಂದು ವಿಶೇಷ ಆಡಿಯೋ-ವಿಡಿಯೋ ಸರ್ವಿಲಾನ್ಸ್ ಸಿಸ್ಟಮ್ ಸಿದ್ಧಪಡಿಸಿದ್ದಾರೆ. ಆಪರೆಶನ್ಸ್ ಗಳಿಗೆ ಅಂತ್ಯ ಹಾಡುವ ಉದ್ದೇಶದಿಂದ ನಾಯಿಗಳಿಗಾಗಿ ಬುಲೆಟ್ ಪ್ರೂಫ್ ಜಾಕೆಟ್ ಕೂಡ ತಯಾರಿಸಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಕಮಲ್ ರಾಜ್ “ಸೇನೆಯ ನಾಯಿಗಳಿಗೆ ನಾವು ಹಲವು ಉದ್ದೇಶಗಳಿಗಾಗಿ ತರಬೇತಿ ನೀಡುತ್ತೇವೆ. ಆದ್ದರಿಂದ ಅವುಗಳ ಸುರಕ್ಷತೆ ನಮ್ಮ ಜವಾಬ್ದಾರಿಯಾಗಿದೆ” ಎಂದಿದ್ದಾರೆ.
ಭಾರತೀಯ ಸೇನೆ ತನ್ನ ಡಾಗ್ ಯುನಿಟ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತದೆ. ಸೇನೆಯ ಮಹತ್ವಪೂರ್ಣ ಕಾರ್ಯಾಚರಣೆಯ ವೇಳೆ ನಾಯಿಗಳ ತಂಡ ಸೇನಾ ಜವಾನರಿಗೆ ಭಾರೀ ನೆರವು ನೀಡುತ್ತವೆ. 26/11 ಮುಂಬೈ ದಾಳಿಯ ವೇಳೆ ಹಲವು ಜನರ ಪ್ರಾಣ ರಕ್ಷಿಸಿದ ‘ಸೀಜರ್’ ನಾಯಿಯನ್ನು ಜನರು ಇಂದಿಗೂ ಕೂಡ ನೆನೆಸುತ್ತಾರೆ ಎಂಬುದು ಇಲ್ಲಿ ಉಲ್ಲೇಖನೀಯ. ಆದರೆ, ಸೀಜರ್ ಇಂದು ಜೀವಂತವಾಗಿಲ್ಲ ಎಂಬುದು ವಿಷಾಧನೀಯ. 11 ವರ್ಷ ವಯಸ್ಸಿನ ಸೀಜರ್ ಮುಂಬೈನ ವಿರಾರ್ ನಲ್ಲಿರುವ ಒಂದು ಫಾರ್ಮ್ ನಲ್ಲಿ ಹಾರ್ಟ್ ಅಟ್ಯಾಕ್ ಗೆ ಒಳಗಾಗಿ ತನ್ನ ಪ್ರಾಣ ತ್ಯಜಿಸಿದೆ.
26/11 ಉಗ್ರ ದಾಳಿಯ ವೇಳೆ ಉಗ್ರರನ್ನು ಪತ್ತೆ ಹಚ್ಚಲು ಬಳಸಲಾದ ಡಾಗ್ ಸ್ಕ್ವಾಡ್ ನ ಅಂತಿಮ ನಾಯಿ ಇದಾಗಿತ್ತು. ಸೀಜರ್ ಗೂ ಮೊದಲು ಸೀಜರ್ ನ ಸಹಪಾಟಿ ನಾಯಿಗಳಾಗಿದ್ದ ಟೈಗರ್, ಸುಲ್ತಾನ್ ಹಾಗೂ ಮ್ಯಾಕ್ಸ್ ಸಾವನ್ನಪ್ಪಿವೆ. ಸೇನೆಯಿಂದ ನಿವೃತ್ತಿ ಹೊಂದಿದ ಬಳಿಕ ಸೀಜರ್ ಮುಂಬೈನ ವಿರಾರ್ ನಲ್ಲಿ ವಾಸವಾಗಿರುವ ಪಶುಪ್ರೇಮಿಯೊಬ್ಬರ ಫಾರ್ಮ್ ಹೌಸ್ ನಲ್ಲಿ ವಾಸಿಸುತ್ತಿತ್ತು. ಚಿಕಿತ್ಸೆಯ ಬಳಿಕ ಸೀಜರ್ ನನ್ನು ಫಾರ್ಮ್ ಹೌಸ್ ಗೆ ಕಳುಹಿಸಲಾಗಿದ್ದು, ಫಾರ್ಮ್ ಹೌಸ್ ನಲ್ಲಿ ಅದು ತನ್ನ ಕೊನೆಯುಸಿರೆಳೆದಿದೆ.
Comments are closed.