ರಾಷ್ಟ್ರೀಯ

ಕಾಶ್ಮೀರದ ನೀಲಂ ಕಣಿಯಲ್ಲಿನ ಭಯೋತ್ಪಾದಕ ಶಿಬಿರವೊಂದನ್ನು ಧ್ವಂಸಗೊಳಿಸಿದ ಭಾರತೀಯ ಸೇನೆ

Pinterest LinkedIn Tumblr

ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ನೀಲಂ ಕಣಿಯಲ್ಲಿನ ಭಯೋತ್ಪಾದಕ ಶಿಬಿರವೊಂದನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ ಎಂದು ವರದಿಗಳು ತಿಳಿಸಿವೆ.

ಭಾರತೀಯ ಸೇನೆ ದಾಳಿಗೆ ಹಲವು ಉಗ್ರರು ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದ್ದು, ಉಗ್ರ ಶಿಬಿರ ಎನ್ನಲಾದ ಸ್ಥಳವು ದಾಳಿಯಿಂದ ಹೊತ್ತಿ ಉರಿಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಪಾಕಿಸ್ತಾನ ಶನಿವಾರ ಮಧ್ಯಾಹ್ನ ಗುರೇಜ್ ಸೆಕ್ಟರ್ ನಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕ್ ನಡೆಸಿದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ದಾಳಿ ನಡೆಸಿದಾಗ, ಉಗ್ರ ಶಿಬಿರವೊಂದನ್ನು ಪತ್ತೆ ಮಾಡಿತ್ತು.

ಶಿಬಿರವನ್ನು ಎನ್ಒಸಿ ಸಮೀಪವೇ ಸ್ಥಾಪಿಸಿ ಉಗ್ರರನ್ನು ಭಾರತಕ್ಕೆ ಕಳುಹಿಸುವ ಉದ್ದೇಶವನ್ನು ಪಾಕಿಸ್ತಾನ ಹೊಂದಿತ್ತು ಎಂದು ಖಾಸಗಿ ಟಿವಿಯೊಂದು ವರದಿ ಮಾಡಿದೆ.

ಈ ನಡುವೆ ಗಡಿ ದಾಟಿ ದಾಳಿ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತನ್ನು ತಳ್ಳಿ ಹಾಕಿರುವ ಭಾರತೀಯ ಸೇನೆ, ಪಾಕಿಸ್ತಾನ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ತಿಳಿಸಿದೆ.

Comments are closed.