ರಾಷ್ಟ್ರೀಯ

ನಮ್ಮ ರಾಜ್ಯದಲ್ಲಿ ಎನ್ ಆರ್ ಸಿ ಜಾರಿಯಾಗಲ್ಲ- ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

Pinterest LinkedIn Tumblr


ಪಾಟ್ನಾ: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಬಿಹಾರದಲ್ಲಿ ಜಾರಿಯಾಗಲ್ಲ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿದ್ದರಿಂದ ಬೆಂಬಲಿಗರಿಂದ ತೀವ್ರ ಟೀಕೆಗೆ ಗುರಿಯಾಗಿರುವ ನಿತೀಶ್ ಕುಮಾರ್, ಅಲ್ಪಸಂಖ್ಯಾತರ ಪರವಾಗಿ ಧೀರ್ಘಕಾಲ ಜೊತೆಯಲ್ಲಿರುವುದಾಗಿ ಭರವಸೆ ನೀಡಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನು ಮೇಲಕ್ಕೆತ್ತಲು ಪ್ರಯತ್ನಿಸಲಾಗುತ್ತಿದೆ. ಈ ಹಿಂದೆ ಆಳ್ವಿಕೆ ನಡೆಸಿದವರು ಅಲ್ಪಸಂಖ್ಯಾತರಿಗೆ ಏನನ್ನು ಪಡೆದಿದ್ದಾರೆ ಎಂಬುದರ ಬಗ್ಗೆ ತಿಳಿಸಬೇಕಾಗಿದೆ ಎಂದಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದ್ದಕ್ಕಾಗಿ ಪ್ರತಿಪಕ್ಷಗಳು ನಿತೀಶ್ ಕುಮಾರ್ ಅವರ ಜಾತ್ಯತೀಯ ಸಿದ್ದಾಂತದ ಬಗ್ಗೆ ಪ್ರಶ್ನಿಸಿದ್ದವು. ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್, ಪ್ರಧಾನ ಕಾರ್ಯದರ್ಶಿ ಪವನ್ ವರ್ಮಾ, ಮತ್ತಿತರ ಅನೇಕ ಮಂದಿ ಪಕ್ಷದ ನಿಲುವನ್ನು ಟೀಕಿಸಿದ್ದರು.

Comments are closed.