
ಜೈಪುರ್: 2008ರ ಜೈಪುರ್ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿನ ನಾಲ್ವರು ಆರೋಪಿಗಳು ದೋಷಿ ಎಂದು ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಖುಲಾಸೆಗೊಳಿಸಿದೆ. ಸರಣಿ ಬಾಂಬ್ ಸ್ಫೋಟದಲ್ಲಿ 80 ಮಂದಿ ಸಾವನ್ನಪ್ಪಿದ್ದು, 170 ಜನರು ಗಾಯಗೊಂಡಿದ್ದರು.
ಭಾರತೀಯ ದಂಡ ಸಂಹಿತೆ, ಕಾನೂನು ಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಹಾಗೂ ಪಿಡಿಪಿಪಿ ಕಾಯ್ದೆಯಡಿ ನಾಲ್ವರು ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಮೊಹಮ್ಮದ್ ಶಾಹಬಾಜ್ ಹುಸೈನ್, ಮೊಹಮ್ಮದ್ ಸೈಫ್ , ಮೊಹಮ್ಮದ್ ಸರ್ವಾರ್ ಅಜ್ಮಿ, ಮೊಹಮ್ಮದ್ ಸೈಫ್ ಅಲಿಯಾಸ್ ಸೈಫುರ್ರಾಮನ್ ಅನ್ಸಾರಿ ಹಾಗೂ ಮೊಹಮ್ಮದ್ ಸಲ್ಮಾನ್ ಪ್ರಕರಣದಲ್ಲಿ ಆರೋಪಿಗಳಾಗಿದ್ದರು.
ಜೈಪುರ್ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮನ್ವಾಕ್ ಚೌಕ್ ಮತ್ತು ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ಒಟ್ಟು ಎಂಟು ಪ್ರಕರಣಗಳು ದಾಖಲಾಗಿದ್ದವು. ಸ್ಫೋಟ ಪ್ರಕರಣದ ಕುರಿತು ರಾಜಸ್ಥಾನ ಎಟಿಎಸ್ (ಭಯೋತ್ಪಾದಕ ನಿಗ್ರಹ ದಳ) ತನಿಖೆ ನಡೆಸಿದ್ಉ, ಐವರು ಆರೋಪಿಗಳ ಮೇಲೆ ಆರೋಪಪಟ್ಟಿ ದಾಖಲಿಸಿತ್ತು.
Comments are closed.