
ಲಕ್ನೋ: ನಮಾಮಿ ಗಂಗಾ ಯೋಜನೆಯ ಪರಿಶೀಲನೆಗಾಗಿ ಗಂಗಾ ಘಾಟಿಗೆ ತೆರಳಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಮೆಟ್ಟಿಲನ್ನು ಎಡವಿ ಬಿದ್ದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ನಮಾಮಿ ಗಂಗಾ ಯೋಜನೆಯ ಪರಿಶೀಲನೆಗಾಗಿ ಕಾನ್ಪುರದ ಗಂಗಾ ಘಾಟಿಗೆ ತೆರಳಿದ್ದರು. ಆಗ ಮೆಟ್ಟಿಲುಗಳನ್ನು ಹತ್ತುವ ವೇಳೆ ಎಡವಿ ಬಿದ್ದಿದ್ದಾರೆ. ತಕ್ಷಣವೇ ಭದ್ರತಾ ಸಿಬ್ಬಂದಿ ಮೋದಿಯವರನ್ನು ಮೇಲಕ್ಕೆತ್ತಿದ್ದಾರೆ.
ಪ್ರಧಾನಿ ಮೋದಿಯವರು ಶನಿವಾರ ಕಾನ್ಪುರಕ್ಕೆ ಆಗಮಿಸಿ, ಬೆಳಗ್ಗೆ ರಾಷ್ಟ್ರೀಯ ಗಂಗಾ ಮಂಡಳಿಯ ಸಭೆ ನಡೆಸಿದ್ದಾರೆ. ನಂತರ ಗಂಗಾ ಸ್ವಚ್ಛತೆ ಬಗ್ಗೆ ಖುದ್ದು ಪರಿಶೀಲಿಸಲು ನಿರ್ಧರಿಸಿದ್ದಾರೆ. ಆಗ ಗಂಗಾ ಸ್ವಚ್ಛತೆ ಪರಿಶೀಲಿಸಲು ಮುಂದಾಗಿದ್ದಾರೆ, ಈ ವೇಳೆ ಮೆಟ್ಟಿಲುಗಳನ್ನು ಹತ್ತುವಾಗ ಎಡವಿ ಬಿದ್ದಿದ್ದಾರೆ. ತಕ್ಷಣವೇ ಪ್ರಧಾನಿ ಮೋದಿಯವರನ್ನು ಅಲ್ಲಿದ್ದ ಸಿಬ್ಬಂದಿ ರಕ್ಷಿಸಿದ್ದಾರೆ.
ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ. ಕಾಂಗ್ರೆಸ್ ನಾಯಕರು ಈ ವಿಚಾರದಲ್ಲೂ ಟೀಕಿಸುತ್ತಿದ್ದು, ಆರ್ಥಿಕತೆಗೆ ಹೋಲಿಸಿ, ವಿಡಿಯೋವನ್ನು ಟ್ರೋಲ್ ಮಾಡುತ್ತಿದ್ದಾರೆ.
Comments are closed.