ರಾಷ್ಟ್ರೀಯ

ಪೌರತ್ವ ಮಸೂದೆ: ಗುಂಡೇಟಿಗೆ ಇಬ್ಬರ ಬಲಿ

Pinterest LinkedIn Tumblr


ಗುವಾಹಟಿ: ಪೌರತ್ವ ತಿದ್ದುಪಡಿ ಕಾನೂನು ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರ ಪೈಕಿ ಇಬ್ಬರು ಗುಂಡೇಟು ತಗುಲಿ ಗುವಾಹಟಿ ವೈದ್ಯಕೀಯ ಕಾಲೇಜಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಪಿಟಿಐ ವರದಿ ಮೂಲಕ ಈ ಮಾಹಿತಿ ಲಭ್ಯವಾಗಿದೆ. ಪೌರತ್ವ ತಿದ್ದುಪಡಿ ಕಾನೂನು ವಿರೋಧಿ ಪ್ರತಿಭಟನೆಯ ಕಿಚ್ಚು ಇಡಿ ಈಶಾನ್ಯ ರಾಜ್ಯಗಳಿಗೆ ವ್ಯಾಪಿಸಿದ್ದು, ಮೇಘಾಲಯ ಸೇರಿದಂತೆ ಹಲವೆಡೆ ಮೊಬೈಲ್ ಇಂಟರ್ ನೆಟ್ ಹಾಗೂ ಮೆಸೇಜಿಂಗ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಾಗಿನಿಂದಲೂ ಮೇಘಾಲಯದಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ಎನ್ ಪಿಪಿಯ ಏಕೈಕ ಸಂಸದ ಅಗಥಾ ಸಂಗ್ಮಾ ಈ ಮಸೂದೆಯನ್ನು ಬೆಂಬಲಿಸಿದ್ದರು. ಈ ನಡುವೆ ಮೇಘಾಲಯ ಮುಖ್ಯಮಂತ್ರಿಗಳಾದ ಕೋನ್ರಾಡ್ ಸಂಗ್ಮಾ ಗೃಹ ಸಚಿವರನ್ನು ಭೇಟಿ ಮಾಡಿ ಮೇಘಾಲಯಕ್ಕೆ ಸಿಎಬಿಯಿಂದ ಯಾವುದೇ ಸಮಸ್ಯೆಯಾಗದಂತೆ ಭದ್ರತೆಯನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.

Comments are closed.