ರಾಷ್ಟ್ರೀಯ

ಎನ್‌ಕೌಂಟರ್‌ ನಕಲಿ ಎಂದು ಸಾಬೀತಾದರೆ ಪೊಲೀಸರಿಗೆ ಅಧಿಕಾರಿಗಳಿಗೆ ಜೀವಾವಧಿ ಶಿಕ್ಷೆ!

Pinterest LinkedIn Tumblr


ಹೊಸದಿಲ್ಲಿ: ದಿಶಾ ಪ್ರಕರಣದ ಆರೋಪಿಗಳ ಎನ್‌ಕೌಂಟರ್‌ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾ­ಗುತ್ತಿದೆ. ಆರೋಪಿಗಳ ಎನ್‌ಕೌಂಟರ್‌ ಮಾಡಿದಾಕ್ಷಣ ಪ್ರಕರಣ ಮುಗಿದು ಹೋಗು­ವುದಿಲ್ಲ, ಎನ್‌ಕೌಂಟರ್‌ ಅನಿವಾರ್ಯ­ವಾಗಿತ್ತು ಎನ್ನುವುದನ್ನು ಪೊಲೀಸರು ನ್ಯಾಯಾಲ¿­ದಲ್ಲಿಸಾಬೀತುಪಡಿಸಬೇಕು. ಒಂದೊಮ್ಮೆ

ಎನ್‌ಕೌಂಟರ್‌ ನಕಲಿ ಎನ್ನುವುದು ನ್ಯಾಯಾಲಯಕ್ಕೆ ಮನವರಿಕೆ­ಯಾದರೆ ಅಧಿಕಾರಿಗಳಿಗೆ ಜೀವಾವಧಿ ಶಿಕ್ಷೆ ಕಟ್ಟಿಟ್ಟ ಬುತ್ತಿ. ಡೆಹರಾಡೂನ್‌ನಲ್ಲಿ 2009ರಲ್ಲಿ ನಡೆದ ಎನ್‌ಕೌಂಟರ್‌ ನಕಲಿ ಎನ್ನುವುದು ಸಾಬೀತಾಗಿ 2014ರಲ್ಲಿ 17 ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಹಾಗೆಯೇ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ 31 ವರ್ಷಗಳ ಹಿಂದೆ ನಡೆದ ಪ್ರಕರಣವೊಂದರಲ್ಲಿ 8 ಪೊಲೀಸರಿಗೆ ಆರು ವರ್ಷ ಹಿಂದೆ ಶಿಕ್ಷೆಯಾಗಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗುಜರಾತ್‌ ಗೃಹ ಸಚಿವರಾಗಿದ್ದಾಗ ನಡೆದ ಸೊಹ್ರಾಬುದ್ದೀನ್‌ ಎನ್‌ಕೌಂಟರ್‌ ಪ್ರಕರಣದಿಂದ ಪಾರಾಗಲು ದಶಕಗಳ ಕಾಲ ಕಾನೂನು ಹೋರಾಟ ನಡೆಸಬೇಕಾಯಿತು.

ಹೈದರಾಬಾದ್‌ನಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಎನ್‌ಕೌಂಟರ್‌ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಈಗಾಗಲೇ ಅನುಮಾನ ವ್ಯಕ್ತಪಡಿಸಿದ್ದು, ತನಿಖೆಗೆ ಆದೇಶಿಸಿದೆ. ಘಟನೆ ಮರು ಸೃಷ್ಟಿಗೆ ಆರೋಪಿಗಳನ್ನು ಕರೆದೊಯ್ದಾಗ ಪೊಲೀಸರು ಮುನ್ನೆಚ್ಚರಿಕೆ ವಹಿಸಿರಲಿಲ್ಲ. ಮಾತ್ರವಲ್ಲ, ಜಾಗರೂಕರಾಗಿಯೂ ಇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಆಯೋಗದ ತನಿಖಾ ವಿಭಾಗದ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದ ತಂಡ ದಿಲ್ಲಿಯಿಂದ ಹೈದರಾಬಾದ್‌ಗೆ ತೆರಳಿ ಎನ್‌ಕೌಂಟರ್‌ ಸ್ಥಳದಲ್ಲಿ ತನಿಖೆ ನಡೆಸಲಿದೆ.

Comments are closed.