ರಾಷ್ಟ್ರೀಯ

ನಮ್ಮ ದೇಶದಲ್ಲಿ ನಿತ್ಯಾನಂದ ದ್ವೀಪ ಖರೀದಿಸಿಲ್ಲ: ಈಕ್ವೆಡಾರ್‌ ಸ್ಪಷ್ಟನೆ

Pinterest LinkedIn Tumblr


ಹೊಸದಿಲ್ಲಿ: ಅತ್ಯಾಚಾರ ಪ್ರಕರಣದ ಆರೋಪ ಹೊತ್ತು ಈಗ ದೇಶ ಬಿಟ್ಟು ಪರಾರಿಯಾಗಿರುವ ಸ್ವ ಘೋಷಿತ ದೇವಮಾನವ ನಿತ್ಯಾನಂದ ಖಾಸಗಿ ದ್ವೀಪ ಖರೀದಿಸಿ ಹೊಸ ದೇಶ ಕಟ್ಟಿದ್ದಾನೆ ಎಂಬ ವರದಿಗಳನ್ನು ಈಕ್ವೆಡಾರ್‌ ತಳ್ಳಿಹಾಕಿದೆ.

ಈಕ್ವೆಡಾರ್‌ನಲ್ಲಿ ಖಾಸಗಿ ದ್ವೀಪ ಖರೀದಿಸಿರುವ ನಿತ್ಯಾನಂದ ಹೊಸ ದೇಶ ನಿರ್ಮಾಣ ಮಾಡುತ್ತಿದ್ದು, ಈ ಸಂಬಂಧ ವಿಶ್ವಸಂಸ್ಥೆಗೂ ಪತ್ರ ಬರೆಯಲಾಗಿದೆ ಎಂದು ವರದಿಗಳು ಬಂದಿತ್ತು.

ಈ ಸುದ್ದಿಯನ್ನು ಈಕ್ವೆಡಾರ್‌ ತಳ್ಳಿಹಾಕಿದೆ.

ನಿತ್ಯಾನಂದಗೆ ಯಾವುದೇ ದ್ವೀಪ ಮಾಡಿಲ್ಲ. ದಕ್ಷಿಣ ಅಮೆರಿಕದ ಆಸುಪಾಸಿನಲ್ಲೂ ಯಾವುದೇ ದ್ವೀಪವನ್ನು ನಿತ್ಯಾನಂದ ಖರೀದಿಸಿಲ್ಲ. ಈ ವಿಷಯದಲ್ಲಿ ನಾವು ಯಾವುದೇ ನಿರ್ಧಾರ ಅಥವಾ ನೆರವು ನೀಡಲ್ಲ. ಆಶ್ರಯ ಕೋರಿ ದೇಶಕ್ಕೆ ಬಂದಿದ್ದು ನಿಜ. ಆದರೆ ಇದನ್ನು ನಿರಾಕರಿಸದ್ದೇವೆ ಎಂದು ಈಕ್ವೆಡಾರ್‌ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.

ಈಕ್ವೆಡಾರ್‌ ಬದಲು ನಿತ್ಯಾನಂದ ಹೈಟಿಯಲ್ಲಿ ಇರಬಹುದು ಎಂದು ಹೇಳಲಾಗಿದೆ. ಆದರೆ ಈ ಕುರಿತು ಇನ್ನೂ ಮಾಹಿತಿ ಸ್ಪಷ್ಟವಾಗಿಲ್ಲ.

ಟ್ರಿನಿಡಾಡ್‌ ದ್ವೀಪಗಳ ಸಮೀಪ ಖಾಸಗಿ ದ್ವೀಪ ಖರೀದಿಸಿ ಹೊಸ ದೇಶ ನಿರ್ಮಿಸಲಾಗುತ್ತಿದೆ. ಇದಕ್ಕೆ ಕೈಲಾಸ ಹಿಂದೂ ರಾಷ್ಟ್ರ ಎಂದು ನಾಮಕರಣ ಮಾಡಲಾಗಿದೆ ಎಂದು ನಿತ್ಯಾನಂದ ಸ್ವಾಮಿ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದ್ದ.

Comments are closed.