ರಾಷ್ಟ್ರೀಯ

ಮದುವೆಯಾಗಿ 20 ದಿನದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳಾ ಟೆಕ್ಕಿಯ ಮೃತದೇಹ

Pinterest LinkedIn Tumblr


ಹೈದರಾಬಾದ್: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳಾ ಟೆಕ್ಕಿಯ ಮೃತದೇಹ ಮಂಗಳವಾರ ಹೈದರಾಬಾದ್‍ನ ಸನತ್‍ನಗರದಲ್ಲಿ ಪತ್ತೆಯಾಗಿದೆ.

ಪೂರ್ಣಿಮಾ ಶವವಾಗಿ ಪತ್ತೆಯಾದ ಮಹಿಳೆ. 20 ದಿನಗಳ ಹಿಂದೆ ಪೂರ್ಣಿಮಾ ಕಾರ್ತಿಕ್ ಎಂಬವನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಕಾರ್ತಿಕ್ ಕೂಡ ಟೆಕ್ಕಿ ಆಗಿದ್ದು, ಇಬ್ಬರು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು.

ಪೋಷಕರ ವಿರೋಧದ ನಡುವೆಯೇ ಪೂರ್ಣಿಮಾ ಹಾಗೂ ಕಾರ್ತಿಕ್ 20 ದಿನಗಳ ಹಿಂದೆ ಮದುವೆಯಾಗಿದ್ದರು. ಮಂಗಳವಾರ ಪೂರ್ಣಿಮಾ ತನ್ನ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.

ಪೂರ್ಣಿಮಾಳನ್ನು ಆಕೆಯ ಪತಿ ಕಾರ್ತಿಕ್ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಅಲ್ಲದೆ ಸನತ್‍ನಗರ ಪೊಲೀಸ್ ಠಾಣೆ ಮುಂದೆ ಕುಳಿತು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಮರಣೋತ್ತರ ಪರೀಕ್ಷೆಗಾಗಿ ಪೂರ್ಣಿಮಾಳ ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ.

Comments are closed.