ನವದೆಹಲಿ: ತನ್ನ ಮೇಲೆ ಉಗುಳಿದಳೆಂದು ಮಹಿಳೆ ಮೇಲೆ ಯುವಕನೋರ್ವ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಉತ್ತರ ದೆಹಲಿಯ ಗುಲಾಬಿ ಬಾಘ್ ಪ್ರದೇಶದಲ್ಲಿನ ಮಹಿಳೆ ಮನೆಯಕಲ್ಲಿಯೇ 22 ವರ್ಷದ ಯುವಕ 55ರ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಧರ್ಮರಾಜ್ ಎಂದು ಗುರುತಿಸಲಾಗಿದ್ದು, ಕೃಷ್ಣಗಂಜ್ ಕಾಲೋನಿಯ ನಿವಾಸಿಯಾಗಿದ್ದಾನೆ.
ಘಟನೆ ನಡೆದ ಮರುದಿನ ಪ್ರಕರಣ ಬೆಳಕಿಗೆ ಬಂದಿದ್ದು, ನೆಲದ ಮೇಲಿದ್ದ ಮಹಿಳೆಯ ಅರೆಬೆತ್ತಲೆ ದೇಹವನ್ನು ನೋಡಿ ಪೊಲೀಸರು ದಂಗಾಗಿದ್ದಾರೆ. ಮಹಿಳೆ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯು ರಾತ್ರಿ ವೇಳೆ ಸಂತ್ರಸ್ತೆಯ ಮನೆಗೆ ನುಗ್ಗಿದ್ದು, ಅತ್ಯಾಚಾರ ಎಸಗಿದ್ದಾನೆ. ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತನಿಖೆ ವೇಳೆ ಪೊಲೀಸರು ಸಂತ್ರಸ್ತೆಯ ಮನೆ ಭಾಗದ ಸಿಸಿಟಿವಿ ವಿಡಿಯೋಗಳನ್ನು ಪರಿಶೀಲಿಸಿದ್ದು, ಆರೋಪಿಯು ಸಂತ್ರಸ್ತೆ ಮನೆಯಿಂದ ಹೊರಡುವ ದೃಶ್ಯ ಸೆರೆಯಾಗಿದೆ. ಆಗ ಪೊಲೀಸರು ಸ್ಥಳೀಯರಿಗೆ ಸಿಸಿಟಿವಿ ವಿಡಿಯೋ ತೋರಿಸಿದ್ದು, ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಮಹಿಳೆ ನನ್ನ ಮುಖದ ಮೇಲೆ ಉಗುಳಿದ್ದಕ್ಕೆ ಅವಳನ್ನು ಕತ್ತು ಹಿಸುಕಿ ಕೊಲೆ ಮಾಡಿದೆ ಎಂದು ಆರೋಪಿ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಬಹು ಚರ್ಚೆಗೆ ಹಾಗೂ ಹೋರಾಟಕ್ಕೆ ಕಾರಣವಾಗಿರುವ ಹೈದರಾಬಾದ್‍ನ ಪಶು ವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಇದು ಬೆಳಕಿಗೆ ಬಂದಿದೆ.
Comments are closed.