ರಾಷ್ಟ್ರೀಯ

ವೈಯಕ್ತಿಕ ದಾಖಲಾತಿಗಳು ಇಲ್ಲವಾದಲ್ಲಿ ಆಧಾರ್ ಕಾರ್ಡ್ ಮಾಡಿಸೋದು ಹೇಗೆ?

Pinterest LinkedIn Tumblr


ಇಂದು ಆಧಾರ್ ಕಾರ್ಡ್ ಅವಶ್ಯಕ ದಾಖಲಾತಿಗಳಲ್ಲಿ ಒಂದಾಗಿದೆ. ಹಣಕಾಸಿನ ವ್ಯವಹಾರಗಳಿಗೆ ಅಧಾರ್ ಕಾರ್ಡ್ ಇಂದು ಅವಶ್ಯಕವಾಗಿದೆ. ಇನ್‍ಕಮ್ ಟ್ಯಾಕ್ಸ್ ರಿಟರ್ನ್ ಅಥವಾ ಸರ್ಕಾರು ಸಬ್ಸಿಡಿ ಪಡೆಯ ಬೇಕಾದ್ರೂ ಆಧಾರ್ ಕಾರ್ಡ್ ನಂಬರ್ ನೀಡಬೇಕು. ಭಾರತೀಯ ನಾಗರಿಕ ಆಧಾರ್ ಕಾರ್ಡ್ ಪಡೆಯಬೇಕಾದ್ರೆ ಗುರುತಿನ ಪತ್ರ (ವ್ಯಾಲಿಟ್ ಐಡೆಂಟಿಫಿಕೇಷನ್ ಪ್ರೂಫ್-PoI) ಅಂದರೆ ಭಾವಚಿತ್ರವುಳ್ಳ ಪಾನ್ ಕಾರ್ಡ್, ಪಾಸ್‍ಪೋರ್ಟ್, ವೋಟರ್ ಐಡಿ ಜೊತೆ ವಿಳಾಸದ ದಾಖಲಾತಿ (PoA) ಯನ್ನು ಹೊಂದಿರಬೇಕು. ಅಡ್ರೆಸ್ ಪ್ರೂಫ್ ಗಾಗಿ ಪಾಸ್‍ಪೋರ್ಟ್, ಬ್ಯಾಂಕ್ ಸ್ಟೇಟಟಮೆಂಟ್/ಪಾಸ್‍ಬುಕ್ ಮೊದಲ ಪುಟ, ವೋಟರ್ ಐಡಿ, ಡ್ರೈವಿಂಗ್ ಲೈಸನ್ಸ್(ಡಿಎಲ್) ಮತ್ತು ಜನ್ಮ ದಿನಾಂಕ ನಮೂದಿಸಲು ದಾಖಲಾತಿ ನೀಡಬೇಕು. ಈ ಮೇಲಿರುವ ದಾಖಲಾತಿಗಳು ನಿಮ್ಮ ಬಳಿಯಲ್ಲಿ ಇಲ್ಲದಿದ್ದರೂ ಆಧಾರ್ ಕಾರ್ಡ್ ಪಡೆಯಲು ಈ ಕೆಳಗಿನಂತೆ ನೀವು ಅರ್ಜಿ ಸಲ್ಲಿಸಬಹುದು.

UIDAI ನ ಆಧಾರ್ ಅರ್ಜಿಯ ನಮೂನೆಯ ಪ್ರಕಾರ, ಯಾರ ಬಳಿ ಗುರುತಿನ ಮತ್ತು ವಿಳಾಸದ ದಾಖಲಾತಿ ಇಲ್ಲದಿರುವ ನಾಗರಿಕರು ಎರಡು ರೀತಿಯಲ್ಲಿ ಆಧಾರ್ ಗಾಗಿ ಅರ್ಜಿ ಸಲ್ಲಿಸಬಹುದು. 1. ಪರಿಚಯಕಾರ(Introducer) 2. ಕುಟುಂಬದ ಮುಖ್ಯಸ್ಥನ ಮೂಲಕ ಆಧಾರ್ ಪಡೆಯಲು ಅವಕಾಶಗಳಿವೆ.

ಕುಟುಂಬದ ಮುಖ್ಯಸ್ಥನ ಮೂಲಕ ಆಧಾರ್ ಗೆ ಅರ್ಜಿ ಸಲ್ಲಿಸುವ ವಿಧಾನ
ವೈಯಕ್ತಿಕ ದಾಖಲಾತಿ ಇಲ್ಲದ ಅರ್ಜಿದಾರ ತನ್ನ ಕುಟುಂಬದ ಮುಖ್ಯಸ್ಥನೊಂದಿಗೆ ಆಧಾರ್ ಕೇಂದ್ರಕ್ಕೆ ತೆರಳಬೇಕು. ಪಡಿತರ ಚೀಟಿಯಲ್ಲಿ ಅರ್ಜಿದಾರನ ಹೆಸರು ಉಲ್ಲೇಖವಾಗಿರಬೇಕು. ಪಡಿತರ ಚೀಟಿ ಜೊತೆ ಮನೆ ಮುಖ್ಯಸ್ಥ ತನ್ನ ವೈಯಕ್ತಿಕ ಗುರುತಿನ ಮತ್ತು ವಿಳಾಸದ ದಾಖಲಾತಿ ಹೊಂದಿರಬೇಕು. ಆಧಾರ್ ಕೇಂದ್ರದಲ್ಲಿ ನೀವು ಸಲ್ಲಿಸುವ ದಾಖಲಾತಿಗಳು ಅರ್ಜಿದಾರ ಮತ್ತು ಮುಖ್ಯಸ್ಥ ನಡುವಿನ ಸಂಬಂಧವನ್ನು ಸ್ಪಷ್ಟವಾಗಿ ಹೇಳುವಂತಿರಬೇಕು. ಅರ್ಜಿದಾರ ಮನೆಯ ಮುಖ್ಯಸ್ಥ ಸಂಬಂಧವನ್ನು ತಿಳಿಸುವ ದಾಖಲಾತಿಗಳ ಪಟ್ಟಿ ಇಲ್ಲಿದೆ.
1. ಪಿಡಿಎಸ್ ಕಾರ್ಡ್ (ಪಡಿತರ ವಿತರಣಾ ಚೀಟಿ)
2. ಮನರೇಗಾ ಜಾಬ್ ಕಾರ್ಡ್
3. CGHS/ECHS/ESIC ಮೆಡಿಕಲ್ ಕಾರ್ಡ್
4. ಪೆನ್ಷನ್ ಕಾರ್ಡ್
5. ಆರ್ಮಿ ಕ್ಯಾಂಟಿನ್ ಕಾರ್ಡ್
6. ಪಾಸ್‍ಪೋರ್ಟ್
7. ಜನನ ಪ್ರಮಾಣ ಪತ್ರ
8. ಕೇಂದ್ರ ಅಥವಾ ರಾಜ್ಯ ಸರ್ಕಾರ ನೀಡಿದ ದಾಖಲೆ
9. ಸರ್ಕಾರದಿಂದ ನೀಡಲಾದ ಮದುವೆ ನೊಂದಣಿ ಪ್ರಮಾಣ ಪತ್ರ
10. ಅಂಚೆ ಇಲಾಖೆಯಿಂದ ನೀಡಲಾಗಿರುವ ಫೋಟೋವುಳ್ಳ ದಾಖಲಾತಿ
11. ಸರ್ಕಾರಿ ಯೋಜನೆ ಫಲಾನುಭವಿಯ ಪತ್ರ
12. ಡಿಸ್ಚಾರ್ಜ್ ಕಾರ್ಡ್/ ಸರ್ಕಾರಿ ಆಸ್ಪತ್ರೆಯಲ್ಲಿ ಜನನ ಪ್ರಮಾಣ ಪತ್ರದ ರಶೀದಿ
13. ಸಂಸದ, ಶಾಸಕ, ಕಾರ್ಪೋರೇಟರ್ ಅಥವಾ ಗೆಜೆಟೆ ಆಫಿಸರ್ಸ್ ನೀಡಿರುವ ಭಾವಚಿತ್ರವುಳ್ಳ ಪ್ರಮಾಣ ಪತ್ರ
14. ಪಂಚಾಯಿತಿ ಅಧ್ಯಕ್ಷ ನೀಡಿರುವ ಭಾವಚಿತ್ರವುಳ್ಳ ಪ್ರಮಾಣ ಪತ್ರ

ಪರಿಚಯಸ್ಥರ ಮೂಲಕ ಅರ್ಜಿ:
ಗುರುತಿನ ಚೀಟಿ ಮತ್ತು ವಿಳಾಸದ ದಾಖಲೆ ಇಲ್ಲದವರು ತಮ್ಮ ಪರಿಚಯಸ್ಥರು ಆಧಾರ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಬಹುದು. ಇಲ್ಲಿ ಪರಿಚಯದಾರ ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿರಬೇಕು. ಅರ್ಜಿ ಸಲ್ಲಿಸುವ ವೇಳೆ ನಿಮ್ಮ ಜೊತೆಯಲ್ಲಿಯೇ ನಿಮ್ಮ ಪರಿಚಯದಾರ ಇರಬೇಕು. ನಿಮ್ಮ ಅರ್ಜಿಯಲ್ಲಿ ಪರಿಚಯದಾರ ಸಹಿ ಮಾಡಬೇಕು ಮತ್ತು ಅಧಿಕಾರಿಗಳಿಗೆ ಅರ್ಜಿದಾರನ ಇರುವಿಕೆ ಬಗ್ಗೆ ಪತ್ರ ಬರೆದುಕೊಡಬೇಕು.

Comments are closed.