ರಾಷ್ಟ್ರೀಯ

ತ್ರಿಮೈತ್ರಿ ಸರ್ಕಾರಕ್ಕೆ ಇಂದು ಬಹುಮತ ಸಾಬೀತಿನ ಅಗ್ನಿಪರೀಕ್ಷೆ

Pinterest LinkedIn Tumblr

ಮುಂಬೈ : ಎನ್‌ಸಿಪಿ-ಶಿವಸೇನಾ-ಕಾಂಗ್ರೆಸ್‌ ನ ತ್ರಿಮೈತ್ರಿ ಸರ್ಕಾರ ಶನಿವಾರ ಬಹುಮತ ಸಾಬೀತಿನ ಅಗ್ನಿಪರೀಕ್ಷೆ ಎದುರಿಸುತ್ತಿದೆ. ವಿಶ್ವಾಸಮತದಲ್ಲಿ ಜಯಿಸುವ ವಿಶ್ವಾಸದಲ್ಲಿದೆ.

ಗುರುವಾರವಷ್ಟೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ಇಂದು ಶನಿವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.

ತಮಗೆ 162 ಶಾಸಕರ ಬೆಂಬಲ ಇರುವುದಾಗಿ ಕೆಲವು ದಿನಗಳ ಹಿಂದೆ ಹೇಳಿದ್ದ ಮೈತ್ರಿ ಪಕ್ಷಗಳು, ಇಂದಿನ ವಿಶ್ವಾಸಮತವನ್ನು ಸುಲಭವಾಗಿ ಜಯಿಸುವ ವಿಶ್ವಾಸದಲ್ಲಿವೆ.

ಎನ್‌ಸಿಪಿ ಶಾಸಕ ದಿಲೀಪ್ ವಾಲ್ಸೆ ಪಾಟೀಲ್ ಅವರು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಆಗಿದ್ದು, ಇಂದಿನ ವಿಶ್ವಾಸಮತ ಯಾಚನೆ ಕಾರ್ಯವನ್ನು ನಡೆಸಿಕೊಡಲಿದ್ದಾರೆ.

ಡಿಸೆಂಬರ್ 3 ರ ಒಳಗೆ ಬಹುಮತ ಸಾಬೀತು ಮಾಡುವಂತೆ ರಾಜ್ಯಪಾಲ ಬಿ.ಎಸ್.ಕೊಶ್ಯಾರಿ ಸೂಚಿಸಿದ್ದರು. ಹಾಗಾಗಿ ಇಂದು ವಿಶ್ವಾಮತ ಯಾಚನೆ ಮಾಡಲು ಮೈತ್ರಿ ಸರ್ಕಾರ ಸಜ್ಜಾಗಿದೆ. ಇಂದು ಮಧ್ಯಾಹ್ನ 2 ಗಂಟೆ ವೇಳೆಗೆ ವಿಶ್ವಾಸಮತ ಯಾಚನೆ ನಡೆಯಲಿದೆ.

ಹಲವು ನಾಟಕೀಯ ತಿರುವುಗಳ ನಂತರ ಗುರುವಾರ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರೊಂದಿಗೆ ಎನ್‌ಸಿಪಿ, ಶಿವಸೇನಾ, ಕಾಂಗ್ರೆಸ್‌ನ ಆರು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

Comments are closed.